ದಕ್ಷಿಣ ಕೊರಿಯದ ಪೊಲೀಸರು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದಾಗ ಕಳೆದ 9 ವರ್ಷಗಳಲ್ಲಿ 125 ಮಹಿಳೆಯರ ಮೇಲೆ ಅವನು ಅತ್ಯಾಚಾರವೆಸಗಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಅವನ ಕುಟುಂಬದ ಹೆಸರಾದ 'ಚಾ'ಎಂದೇ ಗುರುತಿಸಲ್ಪಡುವ 39 ವರ್ಷ ವಯಸ್ಸಿನ ವ್ಯಕ್ತಿ ಸಾಮಗ್ರಿಗಳನ್ನು ರವಾನಿಸುವ ಕೆಲಸ ಮಾಡುತ್ತಿದ್ದ.
125 ಮಹಿಳೆಯರ ಮೇಲೆ ಒಟ್ಟು 200 ಅತ್ಯಾಚಾರಗಳನ್ನು ನಡೆಸಿದ ಆರೋಪ ಎದುರಿಸುತ್ತಿದ್ದು, ಮಹಿಳೆಯರಲ್ಲಿ ಕೆಲವರಿಗೆ ದೇಹದ ಅನೇಕ ಕಡೆಗಳಲ್ಲಿ ಥಳಿತದ ಗಾಯಗಳಾಗಿತ್ತು.ಜುಲೈ 2000 ಮತ್ತು ಜುಲೈ 2009ರ ಅವಧಿಯಲ್ಲಿ ಈ ಹೇಯ ಅಪರಾಧಗಳನ್ನು ಚಾ ಎಸಗಿದ್ದಾಗಿ ಗಿಯೊಂಗಿ ಪ್ರಾಂತ್ಯದ ಪೊಲೀಸರು ತಿಳಿಸಿದ್ದಾರೆ. ಕ್ಲೋಸಡ್ ಸರ್ಕ್ಯೂಟ್ ಟಿವಿ ಸೆರೆಹಿಡಿದಿದ್ದ ಅವನ ಚಿತ್ರದ ಆಧಾರದ ಮೇಲೆ ಪೊಲೀಸರು ಅವನ ಜಾಡು ಪತ್ತೆಹಚ್ಚಿದರು.
ಸುಮಾರು 40 ದಶಲಕ್ಷ ವೋನ್(32,000 ಡಾಲರ್) ಚಿನ್ನಾಭರಣಗಳನ್ನು ಅವನ ಕದ್ದಿದ್ದಾನೆಂದು ಆರೋಪಿಸಲಾಗಿದೆ. ಶಂಕಿತ ಆರೋಪಿಯು ಸೋಲ್‌ನ ಉತ್ತರಕ್ಕೆ ಪಾಜು ನಗರದಲ್ಲಿ ವಾಸಿಸುತ್ತಿದ್ದು, ಬಹುತೇಕ ಯುವ ಮತ್ತು ಒಂಟಿ ಮಹಿಳೆಯರನ್ನು ಅತ್ಯಾಚಾರಕ್ಕೆ ಬಳಸುತ್ತಿದ್ದನೆಂದು ಆರೋಪಿಸಲಾಗಿದೆ. 200 ಅತ್ಯಾಚಾರಗಳನ್ನು ಎಸಗಿದ್ದರೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಿರುಗುತ್ತಿದ್ದ ಅವನು ಸಿಸಿಟಿವಿಯ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದೇ ಸಿಕ್ಕಿಬಿದ್ದನೆಂದು ಹೇಳಲಾಗಿದೆ.