ಮಧ್ಯ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿ ಕನಿಷ್ಠ 35 ಜನರು ಅಸುನೀಗಿದ್ದಾರೆ ಮತ್ತು ಇನ್ನೂ 44 ಮಂದಿ ಗಣಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಹೆನಾನ್ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದೆಯೆಂದು ಸರ್ಕಾರದ ಕೆಲಸದ ಸುರಕ್ಷತೆ ಕಾವಲುಸಮಿತಿ ಪ್ರಕಟಿಸಿದೆ.
ಹೆನಾನ್ ಪ್ರಾಂತ್ಯದ ಪಿಂಗ್‌ಡಿಂಗ್‌ಶಾನ್ ಕಲ್ಲಿದ್ದಲಿನಲ್ಲಿ ಒಟ್ಟು 93 ಜನರು ಕೆಲಸ ಮಾಡುತ್ತಿದ್ದಾಗ ಮುಂಜಾನೆ ಸ್ಫೋಟ ಸಂಭವಿಸಿತೆಂದು ಉದ್ಯೋಗ ಸುರಕ್ಷತೆಯ ರಾಜ್ಯಾಡಳಿತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸುಮಾರು 14 ಜನರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಅದು ತಿಳಿಸಿದೆ. ಚೀನಾ ಉದ್ಯೋಗ ಸುರಕ್ಷತೆಯಲ್ಲಿ ನೀರಸ ದಾಖಲೆ ಹೊಂದಿದ್ದು, ಗಣಿಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಕಟ್ಟಡನಿರ್ಮಾಣ ಸ್ಥಳಗಳಲ್ಲಿ ಸಾವಿರಾರು ಜನರು ಪ್ರತಿ ವರ್ಷ ಪ್ರಾಣಕಳೆದುಕೊಳ್ಳುತ್ತಿದ್ದಾರೆ.
ಕಲ್ಲಿದ್ದಿಲಿನ ಏರುವ ಬೇಡಿಕೆ ಪೂರೈಸಲು ಲಾಭದ ದುರಾಸೆಯಿಂದ ಸುರಕ್ಷತೆ ಗುಣಮಟ್ಟಗಳನ್ನು ಕಲ್ಲಿದ್ದಲು ಗಣಿ ಮಾಲೀಕರು ಕಡೆಗಣಿಸುತ್ತಿದ್ದು, ಗಣಿಗಳು ವಿಶ್ವದಲ್ಲೇ ಅಪಾಯಕಾರಿಯೆಂದು ಹೇಳಲಾಗಿದೆ.