ಬ್ಯುನೊಸ್ ಏರ್ಸ್, ಬುಧವಾರ, 9 ಸೆಪ್ಟೆಂಬರ್ 2009( 10:59 IST )
ದಕ್ಷಿಣ ಅಮೆರಿಕದಲ್ಲಿ ದೈತ್ಯ ಟೊರ್ನೆಡೊ ಎಂದು ಹೇಳಲಾದ ತೀವ್ರ ಬಿರುಗಾಳಿಯಿಂದ ಕನಿಷ್ಠ 17 ಜನರು ಮೃತರಾಗಿದ್ದು, ನೂರಾರು ಮನೆಗಳು ನಾಶವಾಗಿವೆ. ಉತ್ತರ ಅರ್ಜೈಂಟಿನಾ, ದಕ್ಷಿಣ ಬ್ರೆಜಿಲ್ ಮತ್ತು ಉರುಗ್ವೆಯ ಮತ್ತು ಪರಗ್ವೆಯ ಸಣ್ಣ ರಾಷ್ಟ್ರಗಳಲ್ಲಿ ಗಂಟೆಗೆ 120 ಕಿಮೀ ವೇಗದ ಗಾಳಿ ಮತ್ತು ಸತತ ಮಳೆ ಅಪ್ಪಳಿಸಿದೆ. ಉತ್ತರ ಅರ್ಜೈಂಟಿನಾದಲ್ಲಿ ಭೀಕರ ಬಿರುಗಾಳಿಗೆ 7 ಮಕ್ಕಳು ಸೇರಿದಂತೆ 10 ಜನರು ಸತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಟಾ ರೋಸಾ, ಟೊಬ್ಯುನಾ ಮತ್ತು ಪೊಜೊ ಅಜುಲ್‌ನಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಮರಗಳು, ವಿದ್ಯುತ್ ತಂತಿಗಳು ಉರುಳಿಬಿದ್ದಿವೆ.ಬ್ರೆಜಿಲ್ ದಕ್ಷಿಣ ರಾಜ್ಯಗಳಾದ ಸಾಂಟಾ ಕೆಟಾರಿನಾ ಮತ್ತು ಸಾವೊ ಪಾವ್ಲೊದಲ್ಲಿ ಇನ್ನುಳಿದ 7 ಮಂದಿ ಮೃತಪಟ್ಟಿದ್ದು, ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿ ಅಭದ್ರ ಕೊಳೆಗೇರಿಗಳು ಕುಸಿದುಬಿದ್ದಿವೆ.
ಸಾಂಟಾ ಕಾಟರಿನಾದ ನಾಗರಿಕ ರಕ್ಷಣಾ ಸೇನೆ ನಾಲ್ಕು ಸಾವುಗಳನ್ನು ಖಚಿತಪಡಿಸಿದ್ದು, ದಿಢೀರ್ ಬಿರುಗಾಳಿಯನ್ನು ಸಂಭವನೀಯ ಟೊರ್ನಡೊ ಎಂದು ಹೇಳಿದೆ.