ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಾಂಧಿ ಜತೆ ಔತಣಕೂಟ ಬಯಸಿದ ಒಬಾಮಾ (Obama | Gandhi | Hero | Martin Luther)
 
PTI
PTI
ನಿಜವಾದ ಹೀರೊ ಎಂದು ತಾವು ಪರಿಗಣಿಸಿದ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜತೆ ಔತಣ ಕೂಟಕ್ಕೆ ಅವಕಾಶ ಸಿಕ್ಕಿದ್ದರೆ ಭಾಗವಹಿಸುತ್ತಿದ್ದೆನೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಸೆ ವ್ಯಕ್ತಪಡಿಸಿದ್ದಾರೆ. ವಿರ್ಜಿನಿಯ ಆರ್ಲಿಂಗ್‌ಟನ್‌ ವೇಕ್‌ಫೀಲ್ಡ್ ಹೈಸ್ಕೂಲ್‌ನ 9 ಗ್ರೇಡರ್ಸ್ ವಿದ್ಯಾರ್ಥಿಗಳ ಜತೆ ಚರ್ಚೆಯ ಸಂದರ್ಭದಲ್ಲಿ ಲಿಲ್ಲಿ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸುತ್ತಾ, ಒಬಾಮಾ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.

ಶಿಕ್ಷಣ ಕಾರ್ಯದರ್ಶಿ ಜತೆಗೂಡಿದ್ದ ಅವರು, ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಸ್ವಾಗತಿಸುವ ಭಾಷಣ ಮಾಡಿದರು. ಜವಾಬ್ದಾರಿಯನ್ನು ತೆಗೆದುಕೊಂಡು ವೈಫಲ್ಯಗಳಿಂದ ಕಲಿತರೆ ಕೊನೆಗೆ ಜಯ ಸಾಧಿಸಬಹುದು ಎಂದು ಒಬಾಮಾ ಹೇಳಿದರು. ಸತ್ತವರಾಗಲಿ ಅಥವಾ ಬದುಕಿದವರಾಗಲೀ ಔತಣಕೂಟದಲ್ಲಿ ಯಾರ ಜತೆಗೂಡಲು ನೀವು ಇಷ್ಟಪಡುತ್ತೀರೆಂದು ಲಿಲ್ಲಿ ಎಂಬ ವಿದ್ಯಾರ್ಥಿನಿ ಕೇಳಿದಳು.

'ಸತ್ತವರು ಅಥವಾ ಜೀವಂತವಿದ್ದವರ ಜತೆ ಔತಣಕೂಟವೇ, ಅದೊಂದು ದೊಡ್ಡ ಪಟ್ಟಿಯೇ ಆಗುತ್ತದೆ' ಎಂದು ಒಬಾಮಾ ನಗುಬೆರೆತ ದನಿಯಲ್ಲಿ ಹೇಳಿದರು. ಅದೇ ಕ್ಷಣದಲ್ಲಿ ಅವರು ಗಂಭೀರವದನರಾಗಿ, ನಿಮಗೆ ಗೊತ್ತಿರುವಂತೆ ನನ್ನ ನಿಜವಾದ ಹೀರೊ ಎನಿಸಿರುವ ಗಾಂಧಿ ಆಗಬಹುದು ಎಂದು ಒಬಾಮಾ ಹೇಳಿದರು. ಆದರೆ ಅದು ಸಣ್ಣ ಔತಣವೆನಿಸಬಹುದು, ಏಕೆಂದರೆ ಅವರು ಹೆಚ್ಚು ತಿನ್ನುವುದಿಲ್ಲ ಎಂದು ನಗುವಿನ ಅಲೆಯ ನಡುವೆ ಹೇಳಿದರು.

ಮಹಾತ್ಮಾ ಗಾಂಧಿ ಅನೇಕ ತಲೆಮಾರುಗಳವರೆಗೆ ಜಗತ್ತಿನ ಜನರಿಗೆ ಸ್ಪೂರ್ತಿಯಾಗಿದ್ದಾರೆಂದು ಒಬಾಮಾ ನುಡಿದರು. ಗಾಂಧಿ ಅನೇಕ ಮಂದಿಗೆ ಸ್ಫೂರ್ತಿದಾಯಕವಾಗಿದ್ದರೆಂದು ಪರಿಗಣಿಸಿದ ಒಬಾಮಾ, ಗಾಂಧಿ ಡಾ.ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಸ್ಫೂರ್ತಿಯಾಗಿದ್ದರು. ಅವರು ಭಾರತದಲ್ಲಿ ಅಹಿಂಸಾತ್ಮಕ ಚಳವಳಿ ನಡೆಸಿರದಿದ್ದರೆ, ಅಮೆರಿಕದಲ್ಲಿ ಕೂಡ ನಾಗರಿಕ ಹಕ್ಕುಗಳಿಗೆ ಅಹಿಂಸಾತ್ಮಕ ಆಂದೋಳನ ನಿಮಗೆ ಕಾಣುತ್ತಿರಲಿಲ್ಲವೆಂದು ಒಬಾಮಾ ನುಡಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ