ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷರಫ್ ವಿಚಾರಣೆಗೆ ಕುಖ್ಯಾತ ಖಾನ್ ಒಲವು (Khan | Musharraf | Karachi | Aaj News)
 
ಪಾಕ್ ಅಧ್ಯಕ್ಷ ಮುಷರಫ್ ದಶಕದ ಕಾಲದ ತಮ್ಮ ಆಡಳಿತದಲ್ಲಿ ಎಸಗಿದ ಅಪರಾಧಗಳ ವಿಚಾರಣೆ ನಡೆಸಬೇಕು ಎಂದು ಅಣ್ವಸ್ತ್ರ ತಂತ್ರಜ್ಞಾನದ ಅಕ್ರಮ ಪ್ರಸರಣದಲ್ಲಿ ವಿಶ್ವದ ಕುಖ್ಯಾತ ಏಜೆಂಟ್ ಎನಿಸಿದ ಪಾಕಿಸ್ತಾನದ ಅಣ್ವಸ್ತ್ರ ವಿಜ್ಞಾನಿ ಎ.ಕ್ಯೂ.ಖಾನ್ ಅವರು ತಿಳಿಸಿದ್ದಾರೆ. ಕರಾಚಿಯಲ್ಲಿ ಆ.31ರಂದು ಪ್ರಸಾರವಾದ ಆಜ್ ನ್ಯೂಸ್ ಟೆಲಿವಿಷನ್ ಪ್ರಸಾರದಲ್ಲಿ ಮಾತನಾಡುತ್ತಿದ್ದ ಖಾನ್, ಮುಷರಫ್ ವಿರುದ್ಧ ವಿಚಾರಣೆ ನಡೆಯಬೇಕೆಂಬ ವಿಷಯ ತಿಳಿಸಿದರು.

ಮುಷರಫ್ ವಿಚಾರಣೆಗೆ ಸಮರ್ಥನೆಯಾಗಿ ಅವರ ವಿರುದ್ಧ ಆರೋಪಗಳ ತಮ್ಮ ಪಟ್ಟಿಯನ್ನು ಬಿಚ್ಚಿಟ್ಟ ಖಾನ್, ನವಾಬ್ ಅಕ್ಬರ್ ಖಾನ್ ಬುಗ್ಟಿ ಹತ್ಯೆ, ಕೆಂಪು ಮಸೀದಿ ಕಾರ್ಯಾಚರಣೆ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ವಜಾ ಮಾಡಿದ ಕ್ರಮಗಳು ಮುಷರಫ್ ಅಪರಾಧಗಳಲ್ಲಿ ಸೇರಿವೆ ಎಂದು ಖಾನ್ ಹೇಳಿದರು. ಖಾನ್ ಹೇಳಿಕೆಯ ಪ್ರತಿಯನ್ನು ಅಮೆರಿಕ ವಿದ್ಯಾರ್ಥಿಗಳ ಗೋಪ್ಯ ಸುದ್ದಿಗಳ ಒಕ್ಕೂಟ ಪಡೆದುಕೊಂಡಿದೆ.

ಅಣು ವಿಜ್ಞಾನಿ ಖಾನ್ ಅವರನ್ನು ಮುಷರಫ್ ಅಣ್ವಸ್ತ್ರ ಪ್ರಸರಣದ ಆಪಾದನೆ ಮೇಲೆ ಅನೇಕ ವರ್ಷಗಳವರೆಗೆ ಗೃಹಬಂಧನದಲ್ಲಿ ಇರಿಸಿದ್ದರು. ಈ ಹಿನ್ನೆಲೆಯಲ್ಲಿ ಮುಷರಫ್ ಅಪರಾಧಗಳ ಬಗ್ಗೆ ಖಾನ್ ಗಮನಸೆಳೆದು ಅವರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿರಬಹುದೆಂದು ಭಾವಿಸಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ