ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಿದಂಬರಂಗೆ ಅಮೆರಿಕದ ಭದ್ರತಾ ಪಾಠಗಳು (New York | Terrorist | Security | Washington)
 
PTI
PTI
ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಅಮೆರಿಕದ ಆರ್ಥಿಕ ರಾಜಧಾನಿ ನ್ಯೂಯಾರ್ಕ್‌ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಭಯೋತ್ಪಾದಕ ರೆಡಾರ್‌ನಲ್ಲಿರುವ ನಗರವನ್ನು ಭಯೋತ್ಪಾದಕ ದಾಳಿಗಳಿಂದ ರಕ್ಷಿಸುತ್ತಿರುವ ವಿಧಾನದ ಬಗ್ಗೆ ಸ್ವತಃ ಅನುಭವ ಪಡೆದರು.

ಅಮೆರಿಕಕ್ಕೆ ನಾಲ್ಕು ದಿನಗಳ ಪ್ರವಾಸದ ಸಲುವಾಗಿ ಮಂಗಳವಾರ ಪ್ರಥಮ ಹಂತದ ಭೇಟಿ ನೀಡಿರುವ ಅವರಿಗೆ ಎಫ್‌ಬಿಐ ಅಧಿಕಾರಿಗಳು, ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳು ಮತ್ತು ನ್ಯೂಯಾರ್ಕ್ ಪೊಲೀಸರು ಮುಂಬೈ ಮಾದರಿಯಂತ ಭಯೋತ್ಪಾದಕ ದಾಳಿಗಳನ್ನು ತಪ್ಪಿಸಲು ತಾವು ತೆಗೆದುಕೊಂಡ ಕ್ರಮಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.

ಪ್ರತಿ ದಿನ ಸಾವಿರಾರು ರೈಲು ಪ್ರಯಾಣಿಕರನ್ನು ನಿಭಾಯಿಸುವ ಪೆನ್ ನಿಲ್ದಾಣದಲ್ಲಿ ಚಿದಂಬರಂ ಸಾಗುವಾಗ ಮತ್ತು ನ್ಯೂಯಾರ್ಕ್ ಪೊಲೀಸರು, 26/11 ದಾಳಿಗಳ ಬಳಿಕ ಭಯೋತ್ಪಾದನೆ ನಿಗ್ರಹದಲ್ಲಿ ಅನೇಕ ಮಾರ್ಪಾಟುಗಳನ್ನು ಮಾಡಿದ ಬಗ್ಗೆ ಅವರಿಗೆ ವಿವರಣೆ ನೀಡಿದಾಗ,ನ್ಯೂಯಾರ್ಕ್ ನಿವಾಸಿಗಳಿಗೆ ಅನಾನುಕೂಲವಾಗದಂತೆ ಭಯೋತ್ಪಾದಕರಿಂದ ಬೃಹತ್ ನಗರವನ್ನು ರಕ್ಷಿಸುವುದು ಹೇಗೆಂದು ಚಿದಂಬರಂ ಮತ್ತು ಅವರ ಅಧಿಕಾರಿಗಳ ತಂಡಕ್ಕೆ ಅರಿವು ಉಂಟಾಯಿತು.

ಸ್ಟೇಟ್ ಐಲೆಂಡ್‌ನಲ್ಲಿ ಕರಾವಳಿ ರಕ್ಷಣೆ ಸೌಲಭ್ಯದ ಬಗ್ಗೆ ಚಿದಂಬರಂ ಅವರಿಗೆ ಮಾಹಿತಿ ನೀಡಲಾಯಿತು. ಕರಾವಳಿ ಭದ್ರತೆಯು ನ್ಯೂಯಾರ್ಕ್ ಭಯೋತ್ಪಾದನೆ ನಿಗ್ರಹ ವ್ಯವಸ್ಥೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ಬಿಗ್ ಆಪಲ್ ಅಥವಾ ನ್ಯೂಯಾರ್ಕ್‌ನಲ್ಲಿ ಇಳಿದ ಕೆಲವೇ ಗಂಟೆಗಳಲ್ಲಿ ಎ‌ಫ್‌ಬಿಐ ಜಂಟಿ ಭಯೋತ್ಪಾದಕ ಕಾರ್ಯಪಡೆಯ ಕೇಂದ್ರದಲ್ಲಿ ಚಿದಂಬರಂ ಇದ್ದರು. ಅಲ್ಲಿ ನ್ಯೂಯಾರ್ಕ್ ಪೊಲೀಸ್ ಇಲಾಖೆಯು ತಮ್ಮ ನಗರ ರಕ್ಷಣೆಗೆ ಕೈಗೊಂಡ ಸಮಗ್ರ ಕ್ರಮಗಳ ಬಗ್ಗೆ ವಿವರಿಸಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ