ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುಷ್ ಮೇಲೆ ಬೂಟೆಸೆದ ಜೈದಿಗೆ ಬಹುಮಾನದ ಹೊಳೆ (Bush | Zaidi | Shoes | Cars)
 
ಜಾರ್ಜ್ ಡಬ್ಲ್ಯು ಬುಷ್ ಮೇಲೆ ಬೂಟುಗಳನ್ನು ಎಸೆದು ದಿಢೀರ್ ಮನೆಮಾತಾದ ಇರಾಕಿ ಪತ್ರಕರ್ತ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕಾರುಗಳು, ಮನೆಗಳು ಅವರಿಗಾಗಿ ಕಾದಿದ್ದು, ಪತ್ನಿಯೊಬ್ಬರು ಕೂಡ ಅವರಿಗೆ ಕಾದುಕೊಂಡಿದ್ದಾರೆ.

'ಇದೊಂದು ವಿದಾಯದ ಮುತ್ತು, ಎಲೆ ನಾಯಿ, ಇದು ಇರಾಕಿನ ವಿಧವೆಯರು ಮತ್ತು ಅನಾಥರಿಗಾಗಿ' ಎಂದು ಬಾಗ್ದಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬುಷ್ ಅವರತ್ತ ಬೂಟುಗಳನ್ನು ಎಸೆಯುತ್ತಾ ಪತ್ರಕರ್ತ ಮುಂತಾಝರ್ ಅಲ್ ಜೈದಿ ಉದ್ಗರಿಸಿದ್ದರು. ಬೂಟುಗಳನ್ನು ಎಸೆದ ಆರೋಪದ ಮೇಲೆ ಜೈದಿಯನ್ನು ಜೈಲಿಗೆ ತಳ್ಳಿದರೂ ಅವರು ಅರಬ್ ಜಗತ್ತಿನ ಲಕ್ಷಾಂತರ ಜನರ ಅಭಿಮಾನ,ಗೌರವಕ್ಕೆ ಪಾತ್ರರಾಗಿದ್ದರೆಂದು ಗಾರ್ಡಿಯನ್ ವರದಿ ಮಾಡಿದೆ.

ಅಧ್ಯಕ್ಷರು ಕ್ಷಮೆ ನೀಡಿದ ಹಿನ್ನೆಲೆಯಲ್ಲಿ ಮುಂದಿನ ಸೋಮವಾರ ಜೈದಿಯ ಬಿಡುಗಡೆಗೆ ಸಿದ್ಧತೆಗಳು ಸಾಗಿದ್ದು, ಅರಬ್ ಜಗತ್ತಿನ ಮಿಲಿಯಾಂತರ ಜನರ ಅಭಿಮಾನ, ಗೌರವಗಳಿಗೆ ಪಾತ್ರರಾದ ಜೈದಿಯ ಮಾಲೀಕರಾದ ಅಲ್ ಬಗ್ದಾದಿಯ ಟಿವಿ ಚಾನೆಲ್‌ಗೆ ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದೆ. ಮಾಜಿ ಬಾಸ್ ಜೈದಿಗೆ ನಾಲ್ಕು ಕೋಣೆಗಳ ನಿವಾಸವನ್ನು ಕಟ್ಟಿಸಿಕೊಟ್ಟಿದ್ದಾರೆ. ಹೊಸ ಕಾರು, ಇನ್ನೂ ಅನೇಕ ಭರವಸೆಗಳ ಮಹಾಪೂರವೇ ಜೈದಿಗೆ ಕಾದುಕೊಂಡಿವೆ.

ಮೊರಕ್ಕೊನಲ್ಲಿ ವಾಸಿಸುವ ಇರಾಕಿಯೊಬ್ಬ ಜೈದಿಯ ಪತ್ನಿಯಾಗಿ ತಮ್ಮ ಪುತ್ರಿಯನ್ನು ಕಳಿಸಲು ನಿರ್ಧರಿಸಿದ್ದಾರೆ. ಇನ್ನೊಬ್ಬರು ಸೌದಿಯಿಂದ ಕರೆ ಮಾಡಿ ಜೈದಿಯ ಬೂಟುಗಳಿಗೆ 10 ದಶಲಕ್ಷ ಡಾಲರ್ ನೀಡುವುದಾಗಿ ಪ್ರಸ್ತಾಪ ಮಂಡಿಸಿದ್ದಾರೆ. ಇನ್ನೊಬ್ಬ ಮೊರೊಕ್ಕೊದಿಂದ ಕರೆ ಮಾಡಿ ಚಿನ್ನದ ಜೀನಿನ ಕುದುರೆಯನ್ನು ನೀಡುವ ಪ್ರಸ್ತಾಪ ಮಾಡಿದ್ದಾನೆ.

'ಈ ಘಟನೆಯ ಬಳಿಕ ಪ್ಯಾಲೆಸ್ಟೀನ್ ಮತ್ತಿತರ ಕಡೆಗಳಿಂದ ಅನೇಕ ಮಹಿಳೆಯರು ಜೈದಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಅವರಲ್ಲಿ ಬಹುತೇಕ ಮಂದಿಯ ಪ್ರತಿಕ್ರಿಯೆಗಳು ಭಾವನಾತ್ಮಕವಾಗಿದ್ದು, ಜೈದಿ ಬಿಡುಗಡೆಯಾದ ಬಳಿಕ ಏನಾಗುತ್ತದೆಂದು ನೋಡೋಣ' ಎಂದು ಸಂಪಾದಕ ಅಬ್ದುಲ್ ಹಮೀದ್ ಅಲ್‌ಸೈಜ್ ತಿಳಿಸಿದ್ದಾರೆ.
ಇರಾಕಿನಲ್ಲಿ ಅಮೆರಿಕದ ಯುದ್ಧದಿಂದ ಅನೇಕ ಮಹಿಳೆಯರು ಪತಿಯನ್ನು ಕಳೆದುಕೊಂಡ ವಿಧವೆಯಾಗಿ, ಅನೇಕ ಮಕ್ಕಳು ಅನಾಥರಾಗಿರುವ ನಡುವೆ ಬುಷ್ ಮೇಲೆ ಬೂಟೆಸೆತದಿಂದ ಜೈದಿ ಮಿಲಿಯಾಂತರ ಮುಸ್ಲಿಮರ ಕಣ್ಮಣಿಯಾಗಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ