ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಸ್ತೆಗಳಲ್ಲಿ ಸಂಚಾರಕ್ಕೆ ಅತೀ ಅಪಾಯಕಾರಿ ಎರಿಟ್ರಿಯ (World | East Africa | Eritrea | Geneva)
 
ರಸ್ತೆಗಳಲ್ಲಿ ಪ್ರಯಾಣಿಸಲು ಜಗತ್ತಿನಲ್ಲೇ ಅಪಾಯಕಾರಿ ಸ್ಥಳ ದಾರಿದ್ರ್ಯಪೀಡಿತ ಪೂರ್ವ ಆಫ್ರಿಕಾದ ಎರಿಟ್ರಿಯವೆಂದು ವಿಶ್ವ ಆರೋಗ್ಯ ಸಂಘಟನೆ ಡಬ್ಲ್ಯುಎಚ್‌ಒ ಜಾಗತಿಕ ರಸ್ತೆ ಸುರಕ್ಷತೆ ಕುರಿತ ತನ್ನ ಪ್ರಥಮ ವರದಿಯಲ್ಲಿ ತಿಳಿಸಿದೆ. ಅತ್ಯಂತ ಅಪಾಯಕಾರಿ ರಸ್ತೆಗಳನ್ನು ಗುರುತಿಸಲು, ಡಬ್ಲ್ಯುಎಚ್‌ಒ ತಜ್ಞರು ಕೆಲವು ಅಂಕಿಅಂಶಗಳ ಸಂಗ್ರಹವನ್ನು ಪರಿಶೀಲಿಸಿದಾಗ, ಜಗತ್ತಿನ ಹೆದ್ದಾರಿಗಳಲ್ಲಿ ಪ್ರತಿ ವರ್ಷ 13 ಲಕ್ಷ ಜನರು ಅಪಘಾತಗಳಿಗೆ ಸಾಯುತ್ತಿರುವುದನ್ನು ತೋರಿಸಿದೆ.

ಇನ್ನೂ 2 ರಿಂದ 5 ಕೋಟಿ ಜನರು ಮಾರಣಾಂತಿಕವಲ್ಲದ ಗಾಯಗಳಿಗೆ ತುತ್ತಾಗಿದ್ದಾರೆ. ಇಟಲಿಯ ಮಾಜಿ ವಸಾಹತಾಗಿದ್ದ ಎರಿಟ್ರಿಯ ರಸ್ತೆ ಅಪಘಾತಗಳಲ್ಲಿ ದಾಖಲೆ ನಿರ್ಮಿಸಿದ್ದು, ಪ್ರತಿ ಒಂದು ಲಕ್ಷ ಜನರಲ್ಲಿ 48 ಜನರು ಸಾಯುತ್ತಿದ್ದಾರೆಂದು ತಿಳಿದುಬಂದಿದೆ. ದಕ್ಷಿಣ ಪೆಸಿಫಿಕ್‌ನ ಕುಕ್ ದ್ವೀಪಗಳಲ್ಲಿ ರಸ್ತೆ ಪ್ರಯಾಣ ಕೂಡ ಅಪಾಯಕಾರಿಯಾಗಿದ್ದು, 1 ಲಕ್ಷ ಜನರಲ್ಲಿ ಅಂಕಿಅಂಶ ಆಧಾರಿತ 45 ಸಾವುಗಳು ಸಂಭವಿಸಿವೆ.

ನ್ಯೂಜಿಲೆಂಡ್ ಈಶಾನ್ಯದ ದ್ವೀಪಸಮ‌ೂಹವು 14,325 ಪೌರರಿಗೆ ಆವಾಸಸ್ಥಾನವಾಗಿದ್ದು, 2007ರಲ್ಲಿ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಜಿಪ್ಟ್(41.6) ಮತ್ತು ಲಿಬ್ಯಾ(40.5) ಕಳಪೆ ರಸ್ತೆ ಸುರಕ್ಷತೆ ದಾಖಲೆಯನ್ನು ಹೊಂದಿದೆ. ವೇಗವಾಗಿ ವಾಹನ ಚಾಲನೆ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವುದು ಮತ್ತು ಸೀಟ್‌ಬೆಲ್ಟ್ ಬಳಸಲು ವೈಫಲ್ಯ ಮತ್ತು ಚಾಲನೆಯಲ್ಲಿ ಮೊಬೈಲ್ ಫೋನ್ ಬಳಕೆ ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಕೊಡುಗೆ ನೀಡುವ ಅಂಶಗಳು ಎಂದು ವರದಿಯಲ್ಲಿ ತಿಳಿಸಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ