ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ಗೆ ಡ್ರೋನ್ ವಿಮಾನ ಹಸ್ತಾಂತರಿಸಿ: ಮುಷರಫ್ (United States | Pakistan | Musharraf | Drone)
 
ವಿದೇಶಿ ರಾಷ್ಟ್ರಗಳ ಮೇಲೆ ಅವಲಂಬಿತವಾಗದೇ ಉಗ್ರಗಾಮಿಗಳ ವಿರುದ್ಧ ಸ್ವತಃ ಕಾರ್ಯಾಚರಣೆ ನಡೆಸಲು ಡ್ರೋನ್ ವಿಮಾನಗಳನ್ನು ಹಸ್ತಾಂತರಿಸಬೇಕೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಅಮೆರಿಕಕ್ಕೆ ಒತ್ತಾಯಿಸಿದ್ದಾರೆ. ಖಾಸಗಿ ಟೆಲಿವಿಷನ್ ಚಾನೆಲ್ ಜತೆ ನಡೆದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮುಷರಫ್, ವಾಷಿಂಗ್ಟನ್ ಹಿತಾಸಕ್ತಿ ದೃಷ್ಟಿಯಿಂದ ಭಯೋತ್ಪಾದನೆ ವಿರುದ್ಧ ಯುದ್ಧ ಮಾಡುತ್ತಿಲ್ಲ,

ಇಸ್ಲಾಮಾಬಾದ್ ಹಿತಾಸಕ್ತಿಯಿಂದಲೂ ಯುದ್ಧ ಮಾಡುತ್ತಿದೆಯೆಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಅಮೆರಿಕ ಅಥವಾ ಯಾವುದೇ ವಿದೇಶಿ ಪಡೆಗಳು ಆಗಮಿಸುವುದು ಸೂಕ್ಷ್ಮತೆಯಿಂದ ಕೂಡಿದ್ದರಿಂದ ಡ್ರೋನ್ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಬೇಕೆಂದು ತಾವು ವೈಯಕ್ತಿಕವಾಗಿ ನಂಬುವುದಾಗಿ ಅವರು ಹೇಳಿದರು.

ಇತ್ತೀಚೆಗೆ ಕಾಣಿಸಿಕೊಂಡ ಆಡಿಯೊ ಮತ್ತು ವಿಡಿಯೊ ಟೇಪ್‌ಗಳ ವಿಶ್ವಾಸಾರ್ಹತೆಯನ್ನು ಕೂಡ ಮುಷರಫ್ ಪ್ರಶ್ನಿಸಿದ್ದು, ಬಿನ್ ಲಾಡೆನ್ ಸತ್ತಿದ್ದಾನೆಂದು ತಾವು ನಂಬಿರುವುದಾಗಿ ಹೇಳಿದ್ದಾರೆ. ಅವನು ಬದುಕಿರುವ ಬಗ್ಗೆ ತಮಗೆ ಸಂಶಯ ಉಂಟಾಗಿದೆ. ಏಕೆಂದರೆ ಆರಂಭದಿಂದಲೂ ಅವನು ಮ‌ೂತ್ರಪಿಂಡದ ಸಮಸ್ಯೆಯಿರುವ ರೋಗಿಯಾದ್ದರಿಂದ ಬದುಕಿರುವ ಬಗ್ಗೆ ತಮಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ