ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆರೋಗ್ಯಸೇವೆ: ಸಾವಿಗೆ ಮುನ್ನ ಕೆನಡಿ ಬರೆದ ಪತ್ರ (Senate | Kennedy | Obama | White House)
 
ತಮ್ಮ ಸಾವಿನ ಕಡೆಯ ದಿನಗಳವರೆಗೆ ಅಮೆರಿಕದ ಸೆನೆಟ್‌ನಲ್ಲಿ ಆರೋಗ್ಯ ಸೇವೆ ಸುಧಾರಣೆಗೆ ದಶಕಗಳ ಕಾಲ ಹೋರಾಟ ಮಾಡಿದ ಎಡ್ವರ್ಡ್ ಕೆನಡಿ, ಕಳೆದ ಮೇನಲ್ಲಿ ತಮಗೆ ಅಂತಿಮ ಪತ್ರ ಬರೆದಿದ್ದರೆಂದು ಅಧ್ಯಕ್ಷ ಒಬಾಮಾ ಬಹಿರಂಗಪಡಿಸಿದ್ದಾರೆ.ಮೆದುಳು ಕ್ಯಾನ್ಸರ್‌ಗೆ ಗುರಿಯಾಗಿದ್ದ ಎಡ್ವರ್ಡ್ ಅವರಿಗೆ ಅದು ಮಾರಣಾಂತಿಕವೆಂದು ತಿಳಿದ ಬಳಿಕ ಒಬಾಮಾ ಅವರಿಗೆ ಪತ್ರ ಬರೆದಿದ್ದು, ತಮ್ಮ ಸಾವಿನ ಬಳಿಕವೇ ಪತ್ರವನ್ನು ಒಬಾಮಾ ಅವರಿಗೆ ತಲುಪಿಸಬೇಕೆಂದು ಸೂಚನೆ ನೀಡಿದ್ದರು.

ಸಂಸತ್ತು ಆ ಪತ್ರವನ್ನು ಬಿಡುಗಡೆ ಮಾಡಿದ್ದು, ನಮ್ಮ ಸಮಾಜದ ಮುಗಿದಿರದ ಕಾರ್ಯವಾದ ಸಮಗ್ರ ಆರೋಗ್ಯ ಸುಧಾರಣೆಗೆ ಎಡ್ವರ್ಡ್ ಈ ಪತ್ರದಲ್ಲಿ ಕರೆ ನೀಡಿದ್ದಾರೆ. ಅನೇಕ ವರ್ಷಗಳ ಬಳಿಕ ತಮ್ಮ ಪಕ್ಷವು ಸಂಸತ್ತಿನಲ್ಲಿ ಗೆಲುವು ಗಳಿಸಿದ್ದರಿಂದ ತಮ್ಮ ಜೀವನದ ಕೊನೆಯ ತಿಂಗಳು ಸುಸೂತ್ರವಾಗಿ ಸಾಗಲು ನೆರವಾಯಿತೆಂದು ಪತ್ರದಲ್ಲಿ ಬರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಒಬಾಮಾ ಭಾಷಣಮಾಡುವಾಗ ಕೆನಡಿ ಪತ್ರದ ಒಕ್ಕಣೆಯನ್ನು ಓದಿಹೇಳಿ, ಕೆಲವು ತಿಂಗಳುಗಳ ವಾದವಿವಾದಕ್ಕೆ ತೆರೆಎಳೆದು ಈ ವರ್ಷಾಂತ್ಯದಲ್ಲಿ ಪ್ರಮುಖ ಆರೋಗ್ಯ ಸುಧಾರಣೆಗಳನ್ನು ತರಬೇಕೆಂದು ಅವರು ಸದಸ್ಯರಿಗೆ ಕರೆ ನೀಡಿದ್ದರೆಂದು ತಿಳಿಸಿದ್ದಾರೆ.

ಕೆನಡಿಯವರಿಗೆ ಕ್ಯಾನ್ಸರ್‌ನಿಂದ ಇಬ್ಬರು ಮಕ್ಕಳನ್ನು ಕಳೆದುಕೊಂಡ ವೈಯಕ್ತಿಕ ಅನುಭವದಿಂದ ಆರೋಗ್ಯ ಸುಧಾರಣೆ ಕುರಿತು ಅಷ್ಟೊಂದು ಕಾಳಜಿ ಹುಟ್ಟಿದೆಯೆಂದು ಹೇಳಿದ ಅವರು, ಮಗುವು ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿದ್ದಾಗ ಯಾರೇ ಪೋಷಕರು ಅನುಭವಿಸುವ ಅಸಹಾಯಕತೆ ಮತ್ತು ಭಯ ಮರೆಯುವಂತಿಲ್ಲ. ಆರೋಗ್ಯವಿಮೆಯಿಲ್ಲದ ಜನರ ಮನಸ್ಥಿತಿ ಹೇಗಿರುತ್ತದೆಂದು ಅವರು ಅರ್ಥಮಾಡಿಕೊಂಡಿದ್ದಾರೆಂದು ಒಬಾಮಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ