ಇಸ್ತಾನ್‌ಬುಲ್, ಗುರುವಾರ, 10 ಸೆಪ್ಟೆಂಬರ್ 2009( 17:32 IST )
ಟರ್ಕಿಯಲ್ಲಿ ತೀವ್ರ ಪ್ರವಾಹಕ್ಕೆ ಇದುವರೆಗೆ ಸತ್ತವರ ಸಂಖ್ಯೆ ಬುಧವಾರ 14ಕ್ಕೇರಿದೆ. ಇಸ್ತಾನ್‌ಬುಲ್ ಇಕಿಟೆಲ್ಲಿ ಟ್ರಕ್ ಪಾರ್ಕಿಂಗ್ ಪ್ರದೇಶದಲ್ಲಿ ಸತತ ಮಳೆಯಿಂದ ಸಂಭವಿಸಿದ ಪ್ರವಾಹದಲ್ಲಿ ಸಿಕ್ಕಿಬಿದ್ದ ವಾಹನಗಳಲ್ಲಿ ಮೃತಪಟ್ಟ ಇನ್ನೂ ಮೂರು ದೇಹಗಳನ್ನು ರಕ್ಷಣಾ ತಂಡಗಳು ಪತ್ತೆಹಚ್ಚಿವೆ.
ಇದಕ್ಕೆ ಮುಂಚೆ ಇದೇ ಪ್ರದೇಶದಲ್ಲಿ ಇನ್ನೂ ನಾಲ್ಕು ದೇಹಗಳು ಸಿಕ್ಕಿತ್ತು. ನೆರೆಯ ಬಾಗ್ಸಿಲಾರ್‌ನಲ್ಲಿ ಮಿನಿವ್ಯಾನ್‌ನಿಂದ ಇಳಿಯುತ್ತಿದ್ದ 7 ಮಂದಿ ಮಹಿಳೆಯರು ಪ್ರವಾಹದ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಪ್ರವಾಹದಿಂದ ಕೊಚ್ಚಿಕೊಂಡು ಹೋದ ಇನ್ನೂ ಮೂವರನ್ನು ರಕ್ಷಣಾ ತಂಡಗಳು ರಕ್ಷಿಸಿವೆ. ಇಸ್ತಾನ್‌ಬುಲ್ ತೋಟ ಪ್ರದೇಶದಲ್ಲಿ 11 ಜನರು ಸಿಕ್ಕಿಬಿದ್ದಿದ್ದು, ಅಗ್ನಿಶಾಮಕ ದಳ ಮತ್ತು ನಾಗರಿಕ ರಕ್ಷಣಾ ತಂಡಗಳು ಈ ಜನರನ್ನು ರಕ್ಷಿಸಿದರು.
ವಾಯವ್ಯ ಪಟ್ಟಣ ಬಂಡಿಮಾರಾ ಕೂಡ ಪ್ರಚಂಡ ಮಳೆಯಿಂದ ಉಂಟಾದ ಪ್ರವಾಹದ ಪ್ರಕೋಪಕ್ಕೆ ಗುರಿಯಾಯಿತು. ಬಂಡಿಮಾರಾದ ಬಿಳಿ ಮಾಂಸ ತಯಾರಿಕೆ ಸೌಲಭ್ಯದಲ್ಲಿ ಕಾರ್ಮಿಕರು ಸಿಕ್ಕಿಬಿದ್ದು, ಹೆಲಿಕಾಪ್ಟರ್ ಮತ್ತು ಕಮಾಂಡೊಗಳು ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದರು.