ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೀಚ್‌ನಲ್ಲಿ ಮಗಳಿಗೆ ಮುತ್ತು, ತಂದಿತು ಕುತ್ತು (Brazil | Fortaleza | Beach | Guidonia)
 
ಬ್ರೆಜಿಲ್‌ನ ಸಾರ್ವಜನಿಕ ಬೀಚ್‌ನಲ್ಲಿ ತಮ್ಮ 8 ವರ್ಷ ಪ್ರಾಯದ ಮಗಳಿಗೆ ಮುತ್ತು ನೀಡಿದ ಇಟಲಿಯ ಪ್ರವಾಸಿಯೊಬ್ಬರು 15 ವರ್ಷ ಜೈಲುಶಿಕ್ಷೆ ಎದುರಿಸಬೇಕಾದ ಪ್ರಸಂಗ ವರದಿಯಾಗಿದೆ. ಬೀಚ್‌ ಸಮೀಪದ ಈಜುಕೊಳದಲ್ಲಿ ಪ್ರವಾಸಿಗಳ ಸಮಕ್ಷಮದಲ್ಲೇ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಸಹಜವಾಗಿ ಮುಟ್ಟುತ್ತಾ ಪುರುಷನೊಬ್ಬ ಬಾಯಿಗೆ ಮುತ್ತು ನೀಡಿದನೆಂದು ವೃದ್ಧ ಬ್ರೆಜಿಲ್ ದಂಪತಿ ದೂರು ನೀಡಿದ ಬಳಿಕ 48ರ ಪ್ರಾಯದ ಉದ್ಯಮಿಯನ್ನು ಬಂಧಿಸಲಾಗಿತ್ತು.

ತಮ್ಮ ತಂದೆ ಯಾವ ತಪ್ಪು ಮಾಡಿಲ್ಲವೆಂದು ಸ್ವತಃ ಬಾಲಕಿಯೇ ಪ್ರತಿಭಟಿಸಿದರೂ ಇಟಲಿ ಉದ್ಯಮಿಯನ್ನು ಕಸ್ಟಡಿಯಲ್ಲಿಡಲಾಗಿದೆಯೆಂದು ಟೆಲಿಗ್ರಾಫ್ ವರದಿ ಮಾಡಿದೆ. ಫೋರ್ಟಾಲೆಜಾ ಬೀಚ್‌ನಲ್ಲಿ ಅವರ ಬ್ರೆಜಿಲ್ ಪತ್ನಿ ಕೂಡ, ತಮ್ಮ ಪತಿ ಯಾವ ತಪ್ಪು ಮಾಡಿಲ್ಲವೆಂದು ವಾದಿಸಿ,ತಮ್ಮ ಪತಿಯನ್ನು ನಡೆಸಿಕೊಂಡ ರೀತಿಯಿಂದ ಚಕಿತರಾಗಿದ್ದಾಗಿ ಹೇಳಿದ್ದಾರೆ.ವಿದೇಶಿ ಬಿಳಿಯ ವ್ಯಕ್ತಿಯು ಕಪ್ಪು ಚರ್ಮದ ಬಾಲಕಿಯ ಜತೆ ಇದ್ದಿದ್ದನ್ನು ಕಂಡು ಪ್ರತ್ಯಕ್ಷದರ್ಶಿಗಳು ತಪ್ಪಾಗಿ ಭಾವಿಸಿದ್ದಾರೆಂದು ಅವರು ಹೇಳಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ಶೋಷಣೆಯನ್ನು ತಪ್ಪಿಸಲು ಬ್ರೆಜಿಲ್ ಕಳೆದ ತಿಂಗಳು ಕಠಿಣ ಕಾನೂನನ್ನು ಜಾರಿಮಾಡಿದ್ದು, ಈ ಕಾನೂನಿನ ಅಡಿಯಲ್ಲಿ ರೋಮ್‌ನ ಗಿಡೋನಿಯ ಉದ್ಯಮಿಯು ಆರೋಪಕ್ಕೆ ಗುರಿಯಾಗಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯ ಆರೋಪಗಳಿಗೆ 8ರಿಂದ 15 ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ಬ್ರೆಜಿಲ್ ದಂಪತಿಯ ಅತ್ಯುತ್ಸಾಹ ಮತ್ತು ಮಕ್ಕಳ ವೇಶ್ಯಾವಾಟಿಕೆ ತಡೆಯುವ ಸ್ಥಳೀಯ ಪೊಲೀಸರ ಜವಾಬ್ದಾರಿಯಿಂದ ಈ ಬಂಧನ ಸಂಭವಿಸಿದೆಯೆಂದು ಇಟಲಿ ಕಾನ್ಸುಲೇಟ್ ಪರ ವಕೀಲರೊಬ್ಬರು ತಿಳಿಸಿದ್ದಾರೆ. ಉದ್ಯಮಿಯ ಉತ್ತಮ ನಡವಳಿಕೆ ಕುರಿತು ಸಾಕ್ಷ್ಯ ನೀಡುವ ಅನೇಕ ಹೇಳಿಕೆಗಳನ್ನು ಇಟಲಿಯ ಕಾನ್ಸುಲೇಟ್ ಸಂಗ್ರಹಿಸಿದೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ