ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಿಮ್ಮ ಹೆಸರು ಮೊಹಮ್ಮದ್ ಆಗಿದ್ದರೆ ಖುಷಿ ಪಡಿ..! (Mohammed | UK | Jack | Olivia)
 
ನಿಮ್ಮ ಹೆಸರು ಮೊಹಮ್ಮದ್, ಮುಹಮ್ಮದ್, ಮಹಮ್ಮದ್, ಮೊಹಮ್ಮೆದ್ ಎಂದಿದೆಯೇ? ಹಾಗಿದ್ದರೆ ನೀವೀಗ ಕುಣಿದು ಕುಪ್ಪಳಿಸಬಹುದು. ಯಾಕೆಂದರೆ ಇಂಗ್ಲೆಂಡ್‌ನಲ್ಲಿ ಇದು ಎರಡನೇ ಜನಪ್ರಿಯ ಹೆಸರಂತೆ..!

ಆದರೆ ಕಳೆದ ವರ್ಷ ಮಕ್ಕಳಿಗಿಟ್ಟಿರುವ ಹೆಸರುಗಳ ಪಟ್ಟಿ ಬಿಡುಗಡೆಯಾಗಿದ್ದು, ಮುಸ್ಲಿಮ್ ಧರ್ಮೀಯರ ಈ ಹೆಸರು ಅಗ್ರ ಸ್ಥಾನ ಪಡೆಯದೇ ಇರುವುದಕ್ಕೆ ಹಲವರು ಮುನಿಸಿಕೊಂಡಿದ್ದಾರೆ. ಕಾರಣವಿಷ್ಟೇ, ಮೊಹಮ್ಮದ್ ಎಂಬುದನ್ನು ತರಹೇವಾರಿ ರೀತಿಯಲ್ಲಿ ಬರೆಯುತ್ತಿರುವುದು.

ದೇಶದಲ್ಲಿ ಹುಟ್ಟುವ ಮಕ್ಕಳಿಗೆ ಇಡಲಾಗುವ ಹೆಸರಿನಲ್ಲಿ ಅತೀ ಹೆಚ್ಚು ಬಳಕೆ ಮಾಡಲಾದ ಶಬ್ದ ಯಾವುದು ಎಂಬ ಪಟ್ಟಿಯನ್ನು ಬ್ರಿಟನ್ ಸರಕಾರವು ಪ್ರತೀ ವರ್ಷ ಬಿಡುಗಡೆ ಮಾಡುತ್ತದೆ. ಕಳೆದ ವರ್ಷ ಹೆಸರಿಸಲಾದ ಶಬ್ಧವನ್ನು ಈ ವರ್ಷವೂ ಬಿಡುಗಡೆ ಮಾಡಿದೆ. ಅದರ ಪ್ರಕಾರ ಮೊದಲ ಸ್ಥಾನ 'ಜಾಕ್' ಮತ್ತು ಎರಡನೇ ಸ್ಥಾನ 'ಒಲಿವಿಯಾ' ಪಾಲಾಗಿದೆ.

ಆದರೆ ಸರಕಾರ ಬಿಡುಗಡೆ ಮಾಡಿರುವ ಪಟ್ಟಿಯತ್ತ ಗಮನ ಹರಿಸಿ ಲೆಕ್ಕಾಚಾರ ಮಾಡಿದಾಗ ಮೊಹಮ್ಮದ್ ಎಂಬ ಶಬ್ದ ಒಟ್ಟು ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಮೊಹಮ್ಮೆದ್ (Mohammed) ಎಂಬ ಶಬ್ದವನ್ನು 3423 ಮಕ್ಕಳಿಗೆ ಇಡಲಾಗಿದ್ದು 16ನೇ ಸ್ಥಾನ ಪಡೆದುಕೊಂಡಿದೆ. ಮುಹಮ್ಮದ್ (Muhammad) ಎಂಬ ಶಬ್ದವು 2,068 ಮಕ್ಕಳಿಗೆ ಇಡಲಾಗಿದ್ದು, 37ನೇ ಹಾಗೂ ಮೊಹಮ್ಮದ್ (Mohammad) ಎಂಬ ಶಬ್ದವನ್ನು 1,100 ಮಕ್ಕಳಿಗೆ ಇಡಲಾಗಿದ್ದು, 65ನೇ ಸ್ಥಾನ ಪಡೆದಿದೆ.

ಇತರ ಐದು ಸ್ಪೆಲ್ಲಿಂಗ್‌ಗಳನ್ನು ಹುಡುಕುತ್ತಾ ಹೋದಾಗ ಮುಹಮ್ಮದ್ (Muhammed) 496, ಮೊಹಮೆದ್ (Mohamed) 428, ಮೊಹಮದ್ (Mohamad ) 40 ಹಾಗೂ ಮೊಹಮ್ಮೊದ್ (Mohammod) 10 ಹೆಸರುಗಳಂತೆ ಕಳೆದ ವರ್ಷ ಕೂಸುಗಳಿಗೆ ಇಡಲಾಗಿದೆ.

ಇದನ್ನೆಲ್ಲ ಒಟ್ಟು ಸೇರಿಸಿದಾಗ ಒಟ್ಟು ಬಾಲ ಮೊಹಮ್ಮದ್‌ಗಳ ಸಂಖ್ಯೆ 7,576 ಆಗುತ್ತದೆ. ಆದರೆ 7,413 ಹೆಸರುಗಳಿಗೆ ಸಾಕ್ಷಿಯಾಗಿರುವ 'ಒಲಿವರ್' ಎಂಬ ಹೆಸರಿಗೆ ಎರಡನೇ ಸ್ಥಾನ ನೀಡಲಾಗಿದೆ. ಮೊದಲ ಸ್ಥಾನ 8,007 ಹೆಸರುಗಳಿಗೆ ಸೇರಿಕೊಂಡಿರುವ 'ಜಾಕ್' ಪಾಲಾಗಿದೆ.

ಸರಕಾರವು ಪ್ರಕಟಿಸಿರುವ ಈ ಪಟ್ಟಿಯಲ್ಲಿ ತಾರತಮ್ಯ ವಹಿಸಲಾಗಿದೆ ಎಂದು ಇದೀಗ ಹಲವರು ದೂರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ