ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ ನಿಗ್ರಹ: ಎಫ್‌ಬಿಐ ಸಹಕಾರಕ್ಕೆ ಶ್ಲಾಘನೆ (Chidambaram | Obama | Washington | India)
 
PTI
PTI
ಅಮೆರಿಕದಲ್ಲಿ ಒಬಾಮಾ ಆಡಳಿತದ ಜತೆ ತಮ್ಮ ಮ‌ೂರು ದಿನಗಳ ವಿಚಾರವಿನಿಮಯ ಫಲಪ್ರದವಾಗಿದೆಯೆಂದು ಕೇಂದ್ರ ಗೃಹಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ. ಭಾರತ ಎದುರಿಸುತ್ತಿರುವ ಭದ್ರತಾ ವಿಷಯಗಳ ಬಗ್ಗೆ ಅಮೆರಿಕ ಸಕಾರಾತ್ಮಕ ಧೋರಣೆಯಿಂದ ಸ್ಪಂದಿಸಿತು ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ಭಾರತದ ಮಾಧ್ಯಮಕ್ಕೆ ತಿಳಿಸಿದರು.

ಅಮೆರಿಕಕ್ಕೆ ತಮ್ಮ ಚೊಚ್ಚಲ ಪ್ರವಾಸವನ್ನು ಅಂತ್ಯಗೊಳಿಸಿದ ಚಿದಂಬರಂ, ಪಾಕಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದ ಭದ್ರತಾ ಪರಿಸ್ಥಿತಿ ಕುರಿತು ತಾವು ಅಮೆರಿಕದ ಮುಖಂಡರ ಜತೆ ಮಾತುಕತೆ ನಡೆಸಿದ್ದಾಗಿ ಚಿದಂಬರಂ ಹೇಳಿದರು.

ಮುಂಬೈ ಭಯೋತ್ಪಾದನೆ ದಾಳಿಗಳಲ್ಲಿ ಭಾಗಿಯಾದ ಉಗ್ರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಭಾರತದ ಕಳವಳವನ್ನು ಚಿದಂಬರಂ ಮನದಟ್ಟು ಮಾಡಿದರೆಂದು ತಿಳಿದುಬಂದಿದೆ. ಭಯೋತ್ಪಾದನೆ ಅಪರಾಧಗಳ ತನಿಖೆಯಲ್ಲಿ ಭಾರತಕ್ಕೆ ಒಳ್ಳೆಯ ರೀತಿಯಲ್ಲಿ ಸಹಕರಿಸುತ್ತಿರುವ ಫೆಡರಲ್ ತನಿಖಾ ದಳದ ಕಾರ್ಯವೈಖರಿಯನ್ನು ಅವರು ಶ್ಲಾಘಿಸಿದರು.

ಮುಂಬೈ ಭಯೋತ್ಪಾದನೆ ದಾಳಿ ಪ್ರಕರಣದಲ್ಲಿ ಡಿಎನ್‌ಎ ಮಾದರಿಗಳ ವಿಶ್ಲೇಷಣೆ, ಜಿಪಿಎಸ್ ಉಪಕರಣಗಳ ಸಂಕೇತ ಬಿಡಿಸುವಿಕೆಯಲ್ಲಿ ಭಾರತಕ್ಕೆ ಎಫ್‌ಬಿಐ ಉಪಕಾರಿಯಾಗಿದೆ. ಎಫ್‌ಬಿಐ ಇಬ್ಬರು ಅಧಿಕಾರಿಗಳು ಮುಂಬೈ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆಂದು ಅವರು ನುಡಿದರು. ಭಾರತದ ತನಿಖಾ ಸಂಸ್ಥೆಗಳು ಎಫ್‍‌ಬಿಐ ಜತೆ ಉಭಯ ರಾಷ್ಟ್ರಗಳಿಗೆ ಅನುಕೂಲಕರವಾದ ಉತ್ತಮ ಸಂಬಂಧ ಕಾಯ್ದುಕೊಳ್ಳುತ್ತದೆಂದು ಚಿದಂಬರಂ ತಿಳಿಸಿದರು.

ವಾಷಿಂಗ್ಟನ್‌‌ನಲ್ಲಿ ತಂಗಿದ ಕಾಲದಲ್ಲಿ ಚಿದಂಬರಂ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್(ನಿವೃತ್ತ) ಜೇಮ್ಸ್ ಜೋನ್ಸ್, ಎಫ್‌ಬಿಐ ನಿರ್ದೇಶಕ ರಾಬರ್ಟ್ ಮುಲ್ಲರ್ ಮುಂತಾದವರನ್ನು ಚಿದಂಬರಂ ಭೇಟಿ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ