ಆಲ್ಕೊಹಾಲ್ ಮತ್ತು ಹಂದಿಯ ವ್ಯುತ್ಪನ್ನಗಳನ್ನು ಹೊಂದಿರುವ ಚರ್ಮದ ಕ್ರೀಮ್‌ಗಳನ್ನು ಬಳಸಿ ಇಸ್ಲಾಂ ಬೋಧನೆಗಳನ್ನು ಉಲ್ಲಂಘಿಸುತ್ತಿದ್ದೇವೆಂಬ ಭಾವನೆ ಮುಸ್ಲಿಂ ಮಹಿಳೆಯರಿಗೆ ಬಂದಿದ್ದರೆ, ಅದಕ್ಕೆ ಲೈಲಾ ಮಂಡಿಯ ಉತ್ತರ, ಹಲಾಲ್ ಸೌಂದರ್ಯವರ್ಧಕ.
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಕೆನಡಾದ ಮೇಕಪ್ ಕಲಾವಿದೆ ಒನ್‌ಪ್ಯೂರ್ ಎಂಬ ಸೌಂದರ್ಯವರ್ಧಕ ಮಾರಾಟ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಐಷಾರಾಮಿ ಸ್ಪರ್ಶವಿದೆ. ಆದರೆ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ನಿಷೇಧಿತ ವಸ್ತುಗಳು ಮೈನಸ್ ಎಂದು ಹೇಳಿದ್ದಾರೆ.ಇಸ್ಲಾಮಿಕ್ ಬ್ಯಾಂಕಿಂಗ್‌ನಿಂದ ಹಿಡಿದು ಆಲ್ಕೊಹಾಲ್ ಮುಕ್ತ ಹೊಟೆಲ್‌ಗಳಲ್ಲಿ ಹಲಾಲ್ ಎಂಬ ಉತ್ಪನ್ನಗಳು ದಿನಕ್ಕೆ ಐದು ಬಾರಿ ಪ್ರಾರ್ಥನೆ ಮತ್ತಿತರ ವಿಧಿಗಳನ್ನು ಆಚರಿಸುವ ಧಾರ್ಮಿಕ ಶ್ರದ್ಧೆಯ ಮುಸ್ಲಿಮರಲ್ಲಿ ಜನಪ್ರಿಯತೆ ಗಳಿಸಿದೆ.
ಕಾನೂನುಬದ್ಧ ಎಂದು ಅರೇಬಿಕ್‌ನಲ್ಲಿ ಹೇಳುವ ಹಲಾಲ್ ಪರಿಕಲ್ಪನೆ ಅಡಿಯಲ್ಲಿ ಕುರಾನ್ ನಿಯಮಗಳ ಅನ್ವಯ ಆಲ್ಕೊಹಾಲ್, ಹಂದಿ ಮತ್ತು ಅದರ ಉತ್ಪನ್ನಗಳ ಬಳಕೆಯನ್ನು ನಿಷೇಧಿಲಾಗಿದೆ.ಶಾಂಪೂಗಳು, ಮುಖ ಗವಸುಗಳು ಮತ್ತು ಲಿಪ್‌ಸ್ಟಿಕ್‌ಗಳಲ್ಲಿ ಬಳಸುವ ಫ್ಯಾಟಿ ಆಸಿಡ್, ಗಿಲಾಟಿನ್‌ಗಳನ್ನು ಹಂದಿಗಳಿಂದ ತೆಗೆಯಲಾಗುತ್ತದೆಂದು ಮಂಡಿ ಹೇಳಿದ್ದಾರೆ.
ಹಲಾಲ್ ಉತ್ಪನ್ನಗಳನ್ನು ಸೃಷ್ಟಿಸಲು ನಿರ್ಧರಿಸಿದ ಮಂಡಿ, ಚರ್ಮತಜ್ಞ ಮತ್ತು ರಸಾಯನ ಶಾಸ್ತ್ರಜ್ಞರನ್ನು ಕರೆಸಿ, ಹಂದಿ ಮತ್ತು ಆಲ್ಕೊಹಾಲ್ ಅಂಶಗಳಿಂದ ಮುಕ್ತವಾದ ಸೌಂದರ್ಯವರ್ಧಕ ಮತ್ತು ಚರ್ಮದ ಆರೋಗ್ಯ ಉತ್ಪನ್ನಗಳನ್ನು ತಯಾರಿಸಲು ಸೂಚಿಸಿದ್ದಾಗಿ ಹೇಳಿದ್ದಾರೆ.