ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುದ್ಧೋನ್ಮಾದ: ಭಾರತದ ಮಾಧ್ಯಮ ವಿರುದ್ಧ ಟೀಕೆ (India | Rhetoric | China | Indian media)
 
ಭಾರತ-ಚೀನಾ ನಡುವೆ ಯುದ್ಧೋನ್ಮಾದ ಮ‌ೂಡಿಸುವ ಮ‌ೂಲಕ ಉಭಯ ರಾಷ್ಟ್ರಗಳ ನಡುವೆ ಬಾಂಧ್ಯವದಲ್ಲಿ ಮಬ್ಬಾದ ಚಿತ್ರಣವನ್ನು ನೀಡಲು ಭಾರತದ ಮಾಧ್ಯಮ ಯತ್ನಿಸುತ್ತಿದ್ದು, ಶತ್ರುತ್ವದ ಬೀಜಗಳನ್ನು ಬಿತ್ತುತ್ತಿದೆಯೆಂದು ಚೀನಾದ ಪ್ರಮುಖ ದಿನಪತ್ರಿಕೆಯೊಂದು ಆರೋಪಿಸಿದೆ. 'ನೀವು ಭಾರತದ ಮಾಧ್ಯಮಗಳ ವರದಿಗಳನ್ನು ನಿಯಮಿತವಾಗಿ ಓದುತ್ತಿದ್ದರೆ, ಭಾರತ ಮತ್ತು ಚೀನಾ ನಡುವೆ ಯುದ್ಧ ಸನ್ನಿಹಿತವೆಂಬ ಭ್ರಮೆ ಮ‌ೂಡುತ್ತದೆ.

ಕಳೆದ ಕೆಲವು ತಿಂಗಳಿಂದ ಭಾರತದ ಮಾಧ್ಯಮ ಉಭಯ ಕಡೆಗಳಿಗೆ ಯುದ್ಧಕ್ಕೆ ಪ್ರೇರಣೆ ನೀಡುತ್ತಿದೆಯೆಂದು' ಚೀನಾ ಡೇಲಿ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬರೆದಿದೆ.ಮಾಹಿತಿ, ಸ್ಫೂರ್ತಿ ನೀಡುವ ಬದಲಿಗೆ, ಸತ್ಯಾಂಶವನ್ನು ತಿಳಿಯುವ ಬದಲಿಗೆ, ವೃತ್ತಿಧರ್ಮವನ್ನು ಬದಿಗೊತ್ತಿ ಯುದ್ಧೋನ್ಮಾದ ಮ‌ೂಡಿಸುತ್ತಿದ್ದು, ಉಭಯ ದೇಶಗಳ ಜನರ ನಡುವೆ ವೈರವನ್ನು ಹುಟ್ಟುಹಾಕುತ್ತಿದೆಯೆಂದು ಪತ್ರಿಕೆ ತಿಳಿಸಿದೆ.

ಭಾರತದ ಲಡಖ್‌ನೊಳಗೆ ಅತಿಕ್ರಮಿಸಿರುವ ಚೀನಾ ಗಡಿರಕ್ಷಣಾ ಪಡೆ ಕಲ್ಲುಗಳು ಮತ್ತು ಬಂಡೆಗಳ ಮೇಲೆ ಕೆಂಪು ಬಣ್ಣಬಳಿದಿವೆಯೆಂಬ ವರದಿಗಳನ್ನು ಬೀಜಿಂಗ್ ಅಧಿಕೃತವಾಗಿ ನಿರಾಕರಿಸಿದ ಎರಡು ದಿನಗಳ ಬಳಿಕ ಸಂಪಾದಕೀಯ ಬರೆಯಲಾಗಿದೆ. ಆಂತರಿಕ ಭಿನ್ನಮತ, ಬೆಳೆಯುತ್ತಿರುವ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಚೀನಾ 2012ರಲ್ಲಿ ದಾಳಿ ಮಾಡುತ್ತದೆಂದು ಉತ್ಪ್ರೇಕ್ಷಿತ ವರದಿಗಳನ್ನು ಹರಡಲಾಗುತ್ತಿದೆಯೆಂದು ಪತ್ರಿಕೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ