ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ ದಾಳಿಗೆ 8 ವರ್ಷ: ಅಮೆರಿಕ ಸ್ಮರಣೆ (National day | Obama | New York | Gates)
 
ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11ರ ಭಯಾನಕ ದಾಳಿ ನಡೆದು ಇಂದಿಗೆ 8 ವರ್ಷಗಳು ತುಂಬಿತು, ಈ ದಾಳಿಯ 8ನೇ ವಾರ್ಷಿಕದ ಅಂಗವಾಗಿ ಅಮೆರಿಕದಲ್ಲಿ ಸಾಂಪ್ರದಾಯಿಕ ಆಚರಣೆಗಳು ಮತ್ತು ರಾಷ್ಟ್ರೀಯ ಸೇವಾ ದಿನವಾದ ಇಂದು ದಾಳಿಯಲ್ಲಿ ಮೃತಪಟ್ಟ ದುರ್ದೈವಿಗಳ ಸ್ಮರಣೆ. ಸೆಪ್ಟೆಂಬರ್ 11, 2001 ಅಮೆರಿಕದ ಪಾಲಿಗೆ ದುರ್ದಿನ. ಭಯೋತ್ಪಾದನೆಯ ಕರಾಳಮುಖದ ದರ್ಶನ ಅಮೆರಿಕನ್ನರಿಗೆ ಉಂಟಾಯಿತು,

ನ್ಯೂಯಾರ್ಕ್‌ನ ಪೆಂಟಗಾನ್ ಮತ್ತು ಪೆನ್ಸಿಲ್ವೇನಿಯದಲ್ಲಿ ಭಯೋತ್ಪಾದಕರು ನಾಲ್ಕು ವಿಮಾನಗಳನ್ನು ಕಟ್ಟಡಗಳಿಗೆ ಡಿಕ್ಕಿ ಹೊಡೆದು ಸ್ಪೋಟಿಸಿದ ಆತ್ಮಾಹುತಿ ದಾಳಿಗಳಿಗೆ 3000 ಜನರು ಬಲಿಯಾದರು. ಭಯೋತ್ಪಾದನೆ ದಾಳಿಗಳು ನಡೆದ ಸ್ಥಳದಲ್ಲಿ ಸಾಂಪ್ರದಾಯಿಕ ಆಚರಣೆಗಳಾದ ಕೆಲವು ಕ್ಷಣಗಳ ಮೌನಾಚರಣೆ ಮತ್ತು ಮೃತರ ಹೆಸರನ್ನು ಓದುವ ಕಾರ್ಯಕ್ರಮಗಳು ಸೇರಿವೆ.

ಅಧ್ಯಕ್ಷ ಒಬಾಮಾ ಪೆಂಟಗಾನ್‌ನಲ್ಲಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಅವರನ್ನು ಜತೆಗೂಡಿ ಮೃತರ ಕುಟುಂಬಗಳನ್ನು ಭೇಟಿ ಮಾಡುವುದಲ್ಲದೇ ಮೃತರ ಸಮಾಧಿಗಳಿಗೆ ಪುಷ್ಪಗುಚ್ಛಗಳನ್ನು ಅರ್ಪಿಸಲಿದ್ದಾರೆ.

ಅಧ್ಯಕ್ಷರು ಸಾವಿರಾರು ಜನರು ಪ್ರಾಣಾರ್ಪಣೆ ಮಾಡಿದ ದಿನದ ಮಹತ್ವವನ್ನು ವಿವರಿಸಲಿದ್ದಾರೆಂದು ಶ್ವೇತೆಭವನದ ಪತ್ರಿಕಾಕಾರ್ಯದರ್ಶಿ ರಾಬರ್ಟ್ ಗಿಬ್ಸ್ ತಿಳಿಸಿದರು. ಕಳೆದ ಗುರುವಾರ ಒಬಾಮಾ ಹೇಳಿಕೆಯೊಂದನ್ನು ನೀಡಿ, ಸಮುದಾಯ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಅಮೆರಿಕನ್ನರನ್ನು ಒತ್ತಾಯಿಸಿದರು. ಇಂತಹ ಹೇಯ ಅಪರಾಧ ಎಸಗಿದ ಎಲ್ಲರಿಗೂ ಶಿಕ್ಷೆ ವಿಧಿಸುವ, ಮೃತರಿಗೆ ನ್ಯಾಯ ಒದಗಿಸುವ ಮತ್ತು ರಾಷ್ಟ್ರೀಯ ಭದ್ರತೆ ವಿರುದ್ಧ ಎಲ್ಲ ಬೆದರಿಕೆಗಳನ್ನು ಎದುರಿಸುವ ಪ್ರತಿಜ್ಞೆ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ