ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11 ವಿಚಾರಣೆ 4 ತಿಂಗ್ಳಲ್ಲೇ ಮುಗಿಸ್ತೇವೆ: ಪಾಕ್ (Pakistan | Saeed | Mumbai | Malik)
 
ಮುಂಬೈ ದಾಳಿಗಳಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿತರಾದ ಲಷ್ಕರೆ ತೊಯ್ಯಬಾ ಉಗ್ರರ ವಿಚಾರಣೆಯನ್ನು ನಾಲ್ಕು ತಿಂಗಳೊಳಗೆ ಮುಗಿಸುವುದಾಗಿ ಪಾಕಿಸ್ತಾನ ಶುಕ್ರವಾರ ತಿಳಿಸಿದೆ. ಆದರೆ ಲಷ್ಕರೆ ಸಂಸ್ಥಾಪಕ ಹಫೀಜ್ ಮೊಹಮದ್ ಸಯೀದ್ ವಿರುದ್ಧ ಭಾರತ ಒದಗಿಸಿದ್ದ ಸಾಕ್ಷ್ಯಾಧಾರ ಪರಿಶೀಲನೆಗೆ ಮಾತ್ರ ಇನ್ನಷ್ಟು ಕಾಲಾವಕಾಶವನ್ನು ಪಾಕಿಸ್ತಾನ ಕೇಳಿದೆ.

26/11 ದಾಳಿಗಳ ಕಾರಣಕರ್ತರನ್ನು ಕಟಕಟೆಗೆ ತರಲು ಪಾಕಿಸ್ತಾನ ಯಾವುದೇ ಪ್ರಗತಿ ತೋರಿಸಿಲ್ಲವೆಂದು ಗೃಹಸಚಿವ ಚಿದಂಬರಂ ವಾದವನ್ನು ಅಲ್ಲಗಳೆದ ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್, ಈದ್ ಉತ್ಸವದ ಬಳಿಕ ದಿನನಿತ್ಯದ ವಿಚಾರಣೆ ನಡೆಯಲಿದ್ದು, ನಿಗದಿತ ಕಾಲಾವಧಿಯೊಳಗೆ ವಿಚಾರಣೆ ಮುಗಿಯುತ್ತದೆಂದು ಅವರು ಹೇಳಿದರು. ವಿಚಾರಣೆ ಅಂತ್ಯಗೊಳ್ಳಲು ಎರಡೂವರೆ ತಿಂಗಳಿಂದ ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆಂದು ಅವರು ಸ್ಪಷ್ಟಪಡಿಸಿದರು.

ಬಂಧಿತರಾದ ಐವರು ಲಷ್ಕರೆ ಭಯೋತ್ಪಾದಕರ ವಿರುದ್ಧ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಹೊಸದಾಗಿ ಬಂಧಿತರಾದ ಇಬ್ಬರು ಶಂಕಿತರ ವಿರುದ್ಧ ಶೀಘ್ರದಲ್ಲೇ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಅವರು ವರದಿಗಾರರಿಗೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ