ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅರುಣಾಚಲಕ್ಕೆ ದಲೈಲಾಮಾ ಭೇಟಿ: ಚೀನಾ ಕೆಂಗಣ್ಣು (Dalai Lama | Arunachal | China | Taiwan)
 
ಚೀನಾ ತನ್ನ ಭಾಗವೆಂದು ವಾದಿಸುವ ಅರುಣಾಚಲದ ವಿವಾದಿತ ಪ್ರದೇಶಕ್ಕೆ ದಲೈ ಲಾಮಾ ಭೇಟಿ ನೀಡಲು ಯೋಜಿಸಿದ್ದು, ಈಗಾಗಲೇ ದಲೈಲಾಮಾ ತೈವಾನ್ ಭೇಟಿಗೆ ವಿರೋಧಿಸಿದ್ದ ಚೀನಾದ ಕೆಂಗಣ್ಣಿಗೆ ಗುರಿಯಾಗಿದೆ. ನವೆಂಬರ್ ಎರಡನೇವಾರದಲ್ಲಿ ದಲೈಲಾಮಾ ಅರುಣಾಚಲಪ್ರದೇಶದಲ್ಲಿರುತ್ತಾರೆಂದು ಟಿಬೆಟ್‌ನಿಂದ ಬಹಿಷ್ಕೃತರಾದ ಧಾರ್ಮಿಕ ನಾಯಕರ ಸಹಚರ ಚಿಮ್ಮೆ ಚೋಯಿಕ್ಯಾಪಾ ರಾಯ್ಟರ್ಸ್‌ಗೆ ತಿಳಿಸಿದ್ದಾರೆ.

ಅವರು ಬೋಧನೆ ನೀಡಲು ಅರುಣಾಚಲಕ್ಕೆ ತೆರಳುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಚೋಯಿಕ್ಯಾಪಾ ತಿಳಿಸಿದರು. ಅರುಣಾಚಲದ 90,000 ಚದರ ಕಿಮೀ ಪ್ರದೇಶ ತನಗೆ ಸೇರಿದ್ದೆಂದು ಚೀನಾ ಹಕ್ಕುಪ್ರತಿಪಾದನೆ ಮಾಡಿದ್ದು, ದಲೈಲಾಮಾ ಭೇಟಿಯ ನಿರ್ಧಾರದಿಂದ ಈಗಾಗಲೇ ಚೀನಾದಲ್ಲಿ ವಿವಾದದ ಕಿಡಿ ಭುಗಿಲೆದ್ದಿದೆ. ಗಡಿವಿವಾದದಿಂದ ಹದಗೆಟ್ಟ ಬಾಂಧವ್ಯಕ್ಕೆ ಇನ್ನೊಂದು ಕಿರಿಕಿರಿಯಾಗಬಹುದೆಂದು ಹೇಳಲಾಗಿದೆ.

ಈ ಮಾಹಿತಿಯ ಬಗ್ಗೆ ಚೀನಾ ತೀವ್ರವಾದ ಆತಂಕ ವ್ಯಕ್ತಪಡಿಸಿದೆ. ಈ ಭೇಟಿಯಿಂದ ದಲೈಲಾಮಾ ಅವರ ಚೀನಾ ವಿರೋಧಿ ಮತ್ತು ಪ್ರತ್ಯೇಕತಾವಾದಿ ಧೋರಣೆ ಬಯಲಾಗಿದೆಯೆಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಜಿಯಾಂಗ್ ಯು ರಾಯ್ಟರ್ಸ್‌ಗೆ ಫ್ಯಾಕ್ಸ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅರುಣಾಚಲ ಪ್ರದೇಶದ ಬಗ್ಗೆ ಚೀನಾ ನಿಲುವು ಸ್ಥಿರವಾಗಿದೆ.

ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿಯನ್ನು ನಾವು ದೃಢವಾಗಿ ವಿರೋಧಿಸುತ್ತೇವೆಂದು ಜಿಯಾಂಗ್ ಹೇಳಿದ್ದಾರೆ. ದಲೈಲಾಮಾ ಅವರ ಪ್ರವಾಸದ ಯೋಜನೆಯನ್ನು ತೈವಾನ್‌ಗೆ ಅವರ ಭೇಟಿ ಪೂರ್ಣಗೊಂಡ ಬಳಿಕ ಪ್ರಕಟಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ