ವಾಷಿಂಗ್ಟನ್, ಶನಿವಾರ, 12 ಸೆಪ್ಟೆಂಬರ್ 2009( 11:38 IST )
ಮಾತುಕತೆಯ ಇರಾನ್ ಪ್ರಸ್ತಾಪವನ್ನು ಅಮೆರಿಕ ಒಪ್ಪಿಕೊಂಡಿದ್ದು, ಅಣ್ವಸ್ತ್ರ ವಿಚಾರವು ಮಾತುಕತೆಯ ಮುಖ್ಯಭಾಗವಾಗಬೇಕೆಂದು ಪ್ರತಿಪಾದಿಸಿದೆ. ಆದರೆ ಟೆಹ್ರಾನ್ ಪ್ರಸ್ತಾಪದಲ್ಲಿ ತನ್ನ ಭವಿಷ್ಯದ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸುವುದಿಲ್ಲವೆಂದು ಹೇಳಿದೆ. ಈ ತಿಂಗಳಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ವಾರ್ಷಿಕ ಜನರಲ್ ಅಸೆಂಬ್ಲಿ ಸಭೆಗೆ ಮುನ್ನ ಈ ಭೇಟಿ ನಡೆಯುವ ಸಂಭವವಿದೆ.
ನಾವು ಭೇಟಿ ನಡೆಸಲು ಕೋರುತ್ತೇವೆ. ಏಕೆಂದರೆ ಅಂತಿಮವಾಗಿ ಈ ವಿಷಯಗಳ ಇತ್ಯರ್ಥಕ್ಕೆ ಭೇಟಿ ನಡೆಸುವುದೊಂದೇ ಮಾರ್ಗವೆಂದು ನಾವು ಭಾವಿಸಿದ್ದೇವೆಂದು ಕ್ರೌಲೆ ತಿಳಿಸಿದರು.ಅಂತಾರಾಷ್ಟ್ರೀಯ ಸಮುದಾಯದ ದೃಷ್ಟಿಕೋನದ ಪ್ರಕಾರ, ಅಣ್ವಸ್ತ್ರ ವಿಷಯವೇ ಮಾತುಕತೆಯ ಕೇಂದ್ರಬಿಂದುವಾಗಿದೆ.
ಮಾತುಕತೆ ನಡೆಯುವುದಾದರೆ ಅಣ್ವಸ್ತ್ರ ವಿಷಯವನ್ನೇ ನಾವು ತರಲು ಯೋಜಿಸಿದ್ದೇವೆಂದು ತಿಳಿಸಿದರು.ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸದಂತೆ ಇರಾನ್‌ನನ್ನು ತಡೆಯುವುದು ಇದರ ಉದ್ದೇಶವಾಗಿದೆ. ನೇರಮಾತುಕತೆಯ ಮೂಲಕ ಮಾತ್ರ ಇದನ್ನು ಇತ್ಯರ್ಥ ಮಾಡುವುದಾಗಿ ಅವರು ಹೇಳಿದ್ದಾರೆ.