ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಗಡಿಯೊಳಕ್ಕೆ ರಾಕೆಟ್: ನಿರಾಕರಿಸಿದ ಪಾಕ್ (Pakistan | Wagah | India | Rockets)
 
ವಾಘಾ ವಲಯದಲ್ಲಿ ಗಡಿಯಾಚೆಯಿಂದ ಭಾರತದ ಪ್ರದೇಶದೊಳಕ್ಕೆ ಅನೇಕ ರಾಕೆಟ್‌ಗಳನ್ನು ಹಾರಿಸಲಾಗಿದೆಯೆಂದು ಭಾರತದ ಗಡಿಭದ್ರತಾ ಪಡೆಗಳ ಆರೋಪವನ್ನು ಪಾಕಿಸ್ತಾನದ ಗಡಿ ಭದ್ರತಾಪಡೆಗಳು ನಿರಾಕರಿಸಿವೆ. ರಾಕೆಟ್ ಹಾರಿಸಿರುವ ವಿಷಯದ ಬಗ್ಗೆ ಪಾಕಿಸ್ತಾನ ರೇಂಜರ್ಸ್ ಮತ್ತು ಗಡಿಭದ್ರತಾ ಪಡೆಯ ವಲಯ ಕಮಾಂಡರ್‌ಗಳ ಜತೆಗಿನ ಭೇಟಿಯಲ್ಲಿ ಅಪೂರ್ಣವಾಗಿ ಉಳಿದಿವೆಯೆಂದು ಪಾಕಿಸ್ತಾನ ರೇಂಜರ್ಸ್ ವಕ್ತಾರ ತಿಳಿಸಿದ್ದಾರೆ.

ಕೆಲವು ರಾಕೆಟ್‌ಗಳನ್ನು ಪಾಕಿಸ್ತಾನ ನೆಲದಿಂದ ಹಾರಿಸಲಾಗಿದೆಯೆಂದು ಶನಿವಾರ ಮುಂಜಾನೆ ಬಿಎಸ್‌ಎಫ್ ಅಧಿಕಾರಿಗಳು ಆರೋಪಿಸಿದ್ದು, ರೇಂಜರ್ಸ್ ಅಧಿಕಾರಿ ಅದನ್ನು ಅಲ್ಲಗಳೆದಿದ್ದಾರೆಂದು ವಕ್ತಾರ ತಿಳಿಸಿದರು. ವಾಘಾ ಗಡಿಯಲ್ಲಿ ಮ‌ೂರು ಭಾರೀ ಸ್ಪೋಟಗಳು ಕೇಳಿಬಂದ ಹಿನ್ನೆಲೆಯಲ್ಲಿ ವಲಯ ಕಮಾಂಡರ್‌ಗಳು ಮುಂಜಾನೆ ಒಂದು ಗಂಟೆಯ ಬಳಿಕ ಭೇಟಿಯಾಗಿದ್ದರು.

ಈ ಸ್ಪೋಟಗಳಿಂದ ಪಾಕಿಸ್ತಾನದ ಕಡೆಯ ಗ್ರಾಮದಲ್ಲಿ ವ್ಯಾಪಕ ಗಾಬರಿ ಮ‌ೂಡಿಸಿವೆ. ರಾಕೆಟ್ ಹಾರಿಸಿರುವ ಸ್ಥಳವನ್ನು ಮತ್ತು ಹಾರಿಸಿದ ರಾಕೆಟ್‌ಗಳನ್ನು ತಪಾಸಣೆ ಮಾಡಿದ ಹಿರಿಯ ಬಿಎಸ್‌ಎಫ್ ಅಧಿಕಾರಿಗಳು, ಮ‌ೂರು 107 ಎಂಎಂ ರಾಕೆಟ್‌ಗಳನ್ನು ಅಟ್ಟಾರಿ-ವಾಘಾ ಚೌಕಿಯ ಬಳಿ ಶುಕ್ರವಾರ ರಾತ್ರಿ ಭಾರತದ ಗಡಿಯೊಳಕ್ಕೆ ಹಾರಿಸಲಾಗಿದೆಯೆಂದು ತಿಳಿಸಿದ್ದಾರೆ.

ನಾವು ಪಾಕಿಸ್ತಾನ ರೇಂಜರ್ಸ್ ಅಧಿಕಾರಿಗಳನ್ನು ಕಳೆದ ರಾತ್ರಿ ಭೇಟಿ ಮಾಡಿದ್ದೇವೆ. ಪಾಕಿಸ್ತಾನ ಕಡೆಯಿಂದ ರಾಕೆಟ್‌ಗಳನ್ನು ಹಾರಿಸಿರುವುದನ್ನು ರೇಂಜರ್ಸ್ ಅಲ್ಲಗಳೆದಿದ್ದರೂ, ತನಿಖೆ ನಡೆಸಿ ಪ್ರತಿಕ್ರಿಯಿಸಲು ನಾವು ಕಾಲಾವಕಾಶ ನೀಡಿದ್ದೇವೆ. ನಾವು ಪುನಃ ಅವರನ್ನು ಭೇಟಿಯಾಗುತ್ತೇವೆಂದು ಬಿಎಸ್‌ಎಫ್ ಪಂಜಾಬ್ ಪ್ರಾಂತೀಯ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಜಗೀರ್ ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ