ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿಕೋರರಿಗೆ ಶಿಕ್ಷೆ: ಅಮೆರಿಕ ಒತ್ತಡ (Pakistan | Obama | Saeed | Mumbai)
 
ಮುಂಬೈ ದಾಳಿಕೋರರನ್ನು ಕಾನೂನು ಕ್ರಮಕ್ಕೆ ಗುರಿಪಡಿಸಬೇಕೆಂದು ಒಬಾಮಾ ಆಡಳಿತ ಶನಿವಾರ ಪಾಕಿಸ್ತಾನದ ಮೇಲೆ ಒತ್ತಡ ಹೇರಿದೆ. ಲಷ್ಕರೆ ತೊಯ್ಬಾ ಸಂಸ್ಥಾಪಕ ಮತ್ತು ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಜ್ ಮಹಮದ್ ಸಯೀದ್ ಸೇರಿದಂತೆ 26/11 ಕಗ್ಗೊಲೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಪಾಕಿಸ್ತಾನ ಮೀನಮೇಷ ಎಣಿಸುತ್ತಿದೆಯೆಂದು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತಿತರ ಉನ್ನತ ಭದ್ರತಾಅಧಿಕಾರಿಗಳಿಗೆ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಗಡಸು ಮಾತಿನಲ್ಲಿ ಹೇಳಿದ ಬಳಿಕ ಅಮೆರಿಕ ಒತ್ತಡ ಹೇರಿದೆ.

ಈ ಕುರಿತು ಸಾರ್ವಜನಿಕ ವ್ಯವಹಾರಗಳ ವಿದೇಶಾಂಗ ಕಾರ್ಯದರ್ಶಿ ಪಿ.ಜೆ.ಕ್ರೌಲೆ ವರದಿಗಾರರ ಜತೆ ಮಾತನಾಡುತ್ತಾ, ಪಾಕಿಸ್ತಾನ ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರಿಸಿ, ದಾಳಿಗೆ ಕಾರಣಕರ್ತರಿಗೆ ಶಿಕ್ಷೆ ವಿಧಿಸುತ್ತದೆಂದು ಆಶಿಸುವುದಾಗಿ ಹೇಳಿದ್ದಾರೆ.

ಗೃಹಸಚಿವರಾಗಿ ಅಮೆರಿಕಕ್ಕೆ ಚೊಚ್ಚಲ ಭೇಟಿ ನೀಡಿರುವ ಚಿದಂಬರಂ, ಪಾಕಿಸ್ತಾನದಿಂದ ಭದ್ರತಾ ಬೆದರಿಕೆಗಳು ಕುಂದಿಲ್ಲ ಮತ್ತು ಕಳೆದ ನಾಲ್ಕು ತಿಂಗಳಲ್ಲಿ ಭಾರತದ ಗಡಿಯಾಚೆಯಿಂದ ನುಸುಳುವಿಕೆ ಹೆಚ್ಚುತ್ತಿದೆಯೆಂದು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ