ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವದ ಶತಾಯುಷಿ ಮಹಿಳೆ 115ಕ್ಕೆ ವಿಧಿವಶ (California | Obama | Baines | Camanag)
 
1894ರಲ್ಲಿ ಹುಟ್ಟಿದ ವಿಶ್ವದ ಅತ್ಯಂತ ದೀರ್ಘಾಯುಷಿ ಮಹಿಳೆ ತಮ್ಮ 115ನೇ ವರ್ಷ ವಯಸ್ಸಿನಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 6 ಮತ್ತು 7ರ ನಡುವೆ ಲಾಸ್‌ಏಂಜಲ್ಸ್ ಕನ್ವಾಲಸೆಂಟ್ ಆಸ್ಪತ್ರೆಯಲ್ಲಿ ಗರ್ಟ್ರೂಡ್ ಬೈನ್ಸ್ ನಿದ್ರಾವಸ್ಥೆಯಲ್ಲೇ ಸತ್ತಿದ್ದಾರೆ. ಅವರು ಅತ್ಯಂತ ಗೌರವಾನ್ವಿತ ಮಹಿಳೆಯೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಎಮ್ಮಾ ಕಮಾನಾಗ್ ತಿಳಿಸಿದ್ದಾರೆ.

ಕಳೆದ 10 ವರ್ಷಗಳಿಂದ ಅವರ ಆರೈಕೆ ಮಾಡಿದ್ದು ನಮಗೆ ಸಿಕ್ಕ ಗೌರವ ಮತ್ತು ಪುಣ್ಯವೆಂದೂ, ನಾವು ಒಬ್ಬ ಬಂಧುವನ್ನು ಕಳೆದುಕೊಂಡಂತಾಗಿದೆಯೆಂದು ಎಮ್ಮಾ ತಿಳಿಸಿದ್ದಾರೆ. ಬೈನ್ಸ್ ಅವರ ಬಂಧುಗಳು ಯಾರೂ ಜೀವಿಸಿಲ್ಲವೆಂದು ಕಮಾಂಗ್ ತಿಳಿಸಿದ್ದು, ಅವರ ಮನೆಯಲ್ಲಿ ಮತ್ತು ಪ್ರತಿ ಭಾನುವಾರ ಅವರು ಪ್ರಾರ್ಥನೆ ಸಲುವಾಗಿ ಭೇಟಿ ನೀಡುತ್ತಿದ್ದ ಚರ್ಚ್‌ನಲ್ಲಿ ಜನಪ್ರಿಯರಾಗಿದ್ದರು.

ಜಾರ್ಜಿಯದ ಶೆಲ್‌ಮ್ಯಾನ್‌ನಲ್ಲಿ 1894ರ ಏಪ್ರಿಲ್ 6ರಂದು ಹುಟ್ಟಿದ ಬೈನ್ಸ್ ಅವರು ಪೋರ್ಚುಗಲ್‌ನ 115 ವರ್ಷ ಪ್ರಾಯದ ಮಾರಿಯಾ ಡೆ ಜೀಸಸ್ ಜನವರಿಯಲ್ಲಿ ಮೃತಪಟ್ಟ ಬಳಿಕ ವಿಶ್ವದ ದೀರ್ಘಾಯುಷಿ ಎನಿಸಿದ್ದರು. ಜಿಮ್ ಕ್ರೋವ್ ಕಾನೂನುಗಳು ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ದಕ್ಷಿಣ ಅಮೆರಿಕದಲ್ಲಿ ಕರಿಯ ಜನಾಂಗದ ಮಹಿಳೆಯಾಗಿದ್ದರು.

ಆ ಕಾಲದಲ್ಲಿ ಕಪ್ಪು ಜನಾಂಗದವರ ಬಗ್ಗೆ ತಾರತಮ್ಯದ ಭಾವನೆ ಬೆಳೆದಿದ್ದು, ಅವರಿಗೆ ಪ್ರತ್ಯೇಕ ಅಥವಾ ಕಳಪೆ ಸಾರ್ವಜನಿಕ ಸೌಲಭ್ಯಗಳು ಲಭ್ಯವಾಗುತ್ತಿತ್ತು. ಕಳೆದ ನವೆಂಬರ್‌ನಲ್ಲಿ ಒಬಾಮಾ ಅವರಿಗೆ ಮತ ಹಾಕಿದಾಗ ಬೈನ್ಸ್ ಅವರು ಪತ್ರಿಕೆಗಳಲ್ಲಿ ವಿಜೃಂಭಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ