ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಲೂಚಿ ದಾಖಲೆ ನೀಡಿಲ್ಲ: ಪಾಕ್ ಬಣ್ಣ ಬಯಲು (Balochistan | dossier | Mumbai | Gilani)
 
ಬೆಲೂಚಿ ಬಂಡುಕೋರ ಚಟುವಟಿಕೆಯಲ್ಲಿ ಭಾರತದ ಹಸ್ತಕ್ಷೇಪದ ಬಗ್ಗೆ ಭಾರತಕ್ಕೆ ಯಾವುದೇ ದಾಖಲೆಗಳನ್ನು ಹಸ್ತಾಂತರಿಸಿಲ್ಲವೆಂದು ಇಸ್ಲಾಮಾಬಾದ್ ಪ್ರಥಮ ಬಾರಿಗೆ ಒಪ್ಪಿಕೊಳ್ಳುವ ಮ‌ೂಲಕ ತಿರುವುಮುರುವು ಹೇಳಿಕೆ ನೀಡುವ ಪಾಕಿಸ್ತಾನದ ದ್ವಂದ್ವ ನೀತಿಗೆ ಮತ್ತೊಮ್ಮೆ ಸಾಕ್ಷಿಯೊದಗಿಸಿದೆ.

ನಾಮ್ ಶೃಂಗದ ನೇಪಥ್ಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗಿಲಾನಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಪಾಕಿಸ್ತಾನವು ವಾಸ್ತವವಾಗಿ ಭಾರತಕ್ಕೆ ಯಾವುದೇ ದಾಖಲೆಯನ್ನು ಹಸ್ತಾಂತರಿಸಿಲ್ಲವೆಂದು ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.'

ಬೆಲೂಚಿಸ್ತಾನದಲ್ಲಿ ಹಸ್ತಕ್ಷೇಪದ ಬಗ್ಗೆ ನಾವು ಎಚ್ಚರಿಕೆ ನೀಡಿದೆವು. ಭಾರತದಿಂದ ಸಕಾರಾತ್ಮಕ ಧೋರಣೆಯನ್ನು ನಾವು ಬಯಸಿದೆವು ಮತ್ತು ಬೆಲೂಚಿಸ್ತಾನದ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದೆಂದು' ಮಾತ್ರ ಹೇಳಿದ್ದಾಗಿ ಖುರೇಷಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ದಿ ನೇಷನ್ ವರದಿ ಮಾಡಿದೆ. ಬೆಲೂಚಿ ಬಂಡುಕೋರ ಚಟುವಟಿಕೆಯಲ್ಲಿ ಭಾರತ ಭಾಗಿಯಾಗಿರುವ ಬಗ್ಗೆ ಮಾಹಿತಿಗಳನ್ನು ಹಸ್ತಾಂತರಿಸಿರುವುದಾಗಿ ಇದುವರೆಗೆ ಇಸ್ಲಾಮಾಬಾದ್ ಹೇಳುತ್ತಲೇ ಇತ್ತು.

ಆದರೆ ಭಾರತ ಪಾಕ್ ಹೇಳಿಕೆ ನೀಡಿದಾಗಲೆಲ್ಲ ಅಲ್ಲಗಳೆದಿತ್ತು. ಪಾಕಿಸ್ತಾನದ ನಿರಾಧಾರ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಪಕ್ಷದಿಂದ ಯುಪಿಎ ಸರ್ಕಾರ ತೀವ್ರ ಟೀಕಾಪ್ರಹಾರಕ್ಕೆ ಗುರಿಯಾಗಿತ್ತು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು , ಪಾಕಿಸ್ತಾನ ತಮಗೆ ಯಾವುದೇ ಕಡತವನ್ನು ಹಸ್ತಾಂತರಿಸಿಲ್ಲವೆಂದು ಸಂಸತ್ತಿನಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದರು.

ಈಜಿಪ್ಟ್‌ನಲ್ಲಿ ಭಾರತ ತನ್ನನ್ನು ಪಾಕಿಸ್ತಾನಕ್ಕೆ ಮಾರಿಕೊಂಡಿದೆಯೆಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕ ಯಶವಂತ ಸಿನ್ಹಾ, ಜಂಟಿ ಮಾತುಕತೆಯ ಆರಂಭಕ್ಕೂ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಕ್ರಮಕ್ಕೂ ಕೊಂಡಿ ಕಳಚುವ ಮ‌ೂಲಕ ಭಾರತ ದೊಡ್ಡ ಪ್ರಮಾದವೆಸಗಿದೆಯೆಂದು ಆರೋಪಿಸಿದ್ದರು.

ಪಾಕಿಸ್ತಾನದ ಮಾಧ್ಯಮಗಳು ಕೂಡ ಪುಂಖಾನುಪುಂಖವಾಗಿ ವರದಿ ಮಾಡುತ್ತಾ, ಬೆಲೂಚಿಯ ದಾಖಲೆ ಹಸ್ತಾಂತರ ನಿಜವೆಂದೂ ಬೆಲೂಚಿ ಹಸ್ತಕ್ಷೇಪದಲ್ಲಿ ಭಾರತದ ಪಾತ್ರದ ಬಗ್ಗೆ ಪ್ರಧಾನಿ ಸಿಂಗ್ ಅವರಿಗೆ ದಾಖಲೆ ನೀಡಲಾಗಿದೆಯೆಂದು ಬಣ್ಣಿಸಿದ್ದವು. ಆದರೆ ಬೆಲೂಚಿ ದಾಖಲೆಗಳನ್ನು ಭಾರತಕ್ಕೆ ನೀಡಿಲ್ಲವೆಂದು ಹೇಳುವ ಮ‌ೂಲಕ ಪಾಕಿಸ್ತಾನದ ಬಣ್ಣ ಬಯಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ