ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕನ್ನರಿಗೆ ಕಿರುಕುಳ: ಪಾಕ್ ರಾಯಭಾರಿ ಎಚ್ಚರಿಕೆ (Haqqani | Pakistan | American | Harass)
 
ಅಮೆರಿಕನ್ನರಿಗೆ ಕಿರುಕುಳ ನೀಡುವುದು ಮತ್ತು ಅವರಿಗೆ ವೀಸಾ ನಿರಾಕರಿಸಿರುವುದರಿಂದ ದೇಶದ ವರ್ಚಸ್ಸು ಕುಂಠಿತಗೊಳ್ಳುತ್ತದೆ ಮತ್ತು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆಂದು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾದ ಹುಸೇನ್ ಹಕ್ಕಾನಿ ಅವರು ವಿದೇಶಾಂಗ ಕಾರ್ಯದರ್ಶಿ ಮತ್ತು ಐಎಸ್‌ಐ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಹಕ್ಕಾನಿ ಅವರ ರಹಸ್ಯ ಪತ್ರವು ಈ ವರ್ಷದ ಜುಲೈ 28ನೇ ದಿನಾಂಕದಂದು ಬರೆಯಲಾಗಿದ್ದು, ಪಾಕಿಸ್ತಾನ ವಿರುದ್ಧ ಟೀಕೆ ಮಾಡುವ ಅಮೆರಿಕ ಪತ್ರಕರ್ತರು ಮತ್ತು ಎನ್‌ಜಿಒಗಳ ಕಪ್ಪುಪಟ್ಟಿಯನ್ನು ಹೊಂದಿರುವುದನ್ನು ಬಯಲು ಮಾಡಿದೆ.

ಅಮೆರಿಕದ ಪೌರರಿಗೆ ಕಿರುಕುಳ ನೀಡಿದರೆ ಅಥವಾ ಹೆದರಿಸಿದರೆ ಮಿಲಿಟರಿ ಶಸ್ತ್ರಾಸ್ತ್ರ ಮಾರಾಟದಲ್ಲಿ ನಿರ್ಬಂಧ ಮತ್ತು ಅಮೆರಿಕ ಕಾಂಗ್ರೆಸ್‌ನಲ್ಲಿ ಪಾಕ್ ವಿರೋಧಿ ಹೇಳಿಕೆಗಳ ಅಪಾಯ ಕಾದುಕೊಂಡಿವೆಯೆಂದು ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ಮತ್ತು ಐಎಸ್‌ಐ ಮುಖ್ಯಸ್ಥ ಲೆ.ಜ. ಶೂಜಾ ಪಾಶಾಗೆ ರಾಯಭಾರಿ ಹಕ್ಕಾನಿ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ವೀಸಾ ನಿರಾಕರಣೆ, ಕಿರುಕುಳ ಅಥವಾ ಗುಪ್ತಚರ ಕಣ್ಗಾವಲು ಇರಿಸಿದ ಉದಾಹರಣೆಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಇಸ್ಲಾಮಾಬಾದ್ ಪ್ರಭಾವಿ ಎನ್‌ಜಿಒ, ಏಷ್ಯಾ ಪ್ರತಿಷ್ಠಾನದ ಮುಖ್ಯಸ್ಥರಿಗೆ ಮತ್ತು ಎನ್‌ಬಿಸಿ ಪತ್ರಕರ್ತ ರಿಚರ್ಡ್ ಎಂಗೆಲ್‌ಗೆ ವೀಸಾ ನವೀಕರಣ ಮಾಡಿಲ್ಲದಿರುವ ಬಗ್ಗೆ ಅವರು ಬೊಟ್ಟು ಮಾಡಿದ್ದಾರೆ.

ನ್ಯೂಸ್‌ವೀಕ್ ಛಾಯಾಗ್ರಾಹಕ ಕೇಟ್ ಬ್ರೂಕ್ ವೀಸಾ ರದ್ದು ಮಾಡಲಾಗಿದ್ದನ್ನು, ಸಿಎನ್‌ಎನ್ ವರದಿಗಾರನಿಗೆ ಕಿರುಕುಳ ನೀಡಿದ್ದನ್ನು ಅವರು ಪತ್ರದಲ್ಲಿ ಉದಾಹರಿಸಿದ್ದಾರೆ. ಈ ಕ್ರಮಗಳಿಗೆ ತಮಗೆ ವಿವರಣೆ ನೀಡಬೇಕೆಂದು ಹಕ್ಕಾನಿ ಒತ್ತಾಯಿಸಿದ್ದು, ಕಪ್ಪು ಪಟ್ಟಿಯಲ್ಲಿರಿಸಿರುವ ಅಮೆರಿಕನ್ನರ ಹೆಸರನ್ನು ನೀಡಬೇಕೆಂದು ಕೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ