ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಸಿರು ಕ್ರಾಂತಿ ಪಿತಾಮಹ ನಾರ್ಮನ್ ಬೋರ್ಲಗ್ ಇನ್ನಿಲ್ಲ (Nobel Prize winner | Norman Borlaug | Green revolution)
 
ಹಸಿರು ಕ್ರಾಂತಿಯ ಹರಿಕಾರ, ನೋಬೆಲ್ ಪ್ರಶಸ್ತಿ ವಿಜೇತ ನಾರ್ಮನ್ ಬೋರ್ಲಗ್ ಅವರು ತಮ್ಮ 95ನೆ ವಯಸ್ಸಿನಲ್ಲಿ ಟೆಕ್ಸಾಸ್‌ನಲ್ಲಿ ಮೃತರಾಗಿದ್ದಾರೆ.

ವಿಶ್ವದಲ್ಲಿ ಹಸಿವಿನ ವಿರುದ್ಧ ಯುದ್ದಕ್ಕಾಗಿ ಅವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗಿತ್ತು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೃಷಿ ಆವಿಷ್ಕಾರಗಳು ಹಾಗೂ ಉತ್ತಮ ಇಳುವರಿಯ ಬೆಳೆ ಮುಂತಾದ ಇವರ ಕೊಡುಗಾಗಿ ನೋಬೆಲ್ ಪ್ರಶಸ್ತಿ ನೀಡಲಾಗಿತ್ತು. 20ನೇ ಶತಮಾನದ ಉತ್ತರಾರ್ಧದಲ್ಲಿ ಅವರ ಹಸಿರು ಕ್ರಾಂತಿ ಪ್ರವರ್ಧಮಾನಕ್ಕೆ ಬಂದಿತ್ತು.

ಲೋವಾ ಎಂಬಲ್ಲಿ ಜನಿಸಿರುವ ಬೋರ್ಲಗ್ ಅವರು ತಮ್ಮ 90ರ ಇಳಿ ವಯಸ್ಸಿನಲ್ಲೂ ಚಟುವಟಿಕೆಯಿಂದ ಕೂಡಿದ್ದರು. ಹಸಿವಿನ ವಿರುದ್ಧ ಹೋರಾಟಕ್ಕಾಗಿ ಜೈವಿಕತಂತ್ರಜ್ಞಾನವನ್ನು ಬಳಸುವ ಕುರಿತು ಅವರು ಚಳುವಳಿ ಹೂಡಿದ್ದರು. ಇದಲ್ಲದೆ ಬಡತನದ ವಿರುದ್ಧ ಹೋರಾಟದಲ್ಲೂ ಅವರು ತಮ್ಮನ್ನು ತೊಡಗಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ