ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದಲ್ಲಿ ಹಂದಿಜ್ವರ ಹೆಚ್ಚುತ್ತಿದೆ: ವಿಶ್ವ ಆರೋಗ್ಯ ಸಂಸ್ಥೆ (swine flu | India | WHO | Pandemic)
 
ಭಾರತವು ಹಂದಿಜ್ವರ ಎಂಬ ಮಹಾಮಾರಿಯ ಕಪಿಮುಷ್ಟಿಗೆ ಸಿಲುಕಿದ್ದು, ಕಳೆದ ಎರಡು ತಿಂಗಳಿಂದ 165ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಸಾಂಕ್ರಾಮಿಕ ರೋಗದ ಪ್ರವೃತ್ತಿ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಏಷ್ಯಾ ಪ್ರದೇಶಗಳಲ್ಲಿ ಈ ಸೋಂಕು ಭೌಗೋಳಿಕವಾಗಿ ಕೆಲವು ಪ್ರಾಂತ್ಯಗಳಲ್ಲಿ ಅಥವಾ ಎಲ್ಲೆಡೆ ಹಬ್ಬಿದಂತಿದ್ದರೂ, ಭಾರತ, ಬಾಂಗ್ಲಾದೇಶ ಹಾಗೂ ಕಾಂಬೋಡಿಯಾಗಳಲ್ಲಿ ಹೆಚ್ಚಳದ ಪ್ರವೃತ್ತಿಯನ್ನು ಹೊಂದಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿದೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಮಹಾಮಾರಿಯಿಂದ ಸಾವನ್ನಪ್ಪಿದವರ ಸಂಖ್ಯೆ ಅತಿ ಹೆಚ್ಚಿದೆ ಎಂಬುದಾಗಿ ವಿಶ್ವಆರೋಗ್ಯ ಸಂಸ್ಥೆ ಇದೀಗಾಗಲೇ ಹೇಳಿರುವುದಾಗಿ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಚಿಲಿ, ಅರ್ಜೆಂಟೈನಾ, ಆಸ್ಟ್ರಿಯ, ನ್ಯೂಜಿಲ್ಯಾಂಡ್, ಹಾಗೂ ದಕ್ಷಿಣ ಆಫ್ರಿಕಾವನ್ನೊಳಗೊಂಡಿರುವ ದಕ್ಷಿಣ ಗೋಳದಲ್ಲಿ ಹಂದಿಜ್ವರ ಇಳಿಕೆ ಕಂಡಿದೆ ಅಥವಾ ಮಾಮೂಲಿ ಸ್ಥಿತಿಗೆ ಮರಳಿದೆ.

ಭಾರತದ ಬೆಂಗಳೂರು ಹಾಗೂ ಪುಣೆ ನಗರಗಳಲ್ಲಿ ಈ ರೋಗದಿಂದಾಗಿ ಅತೀ ಹೆಚ್ಚು ಸಾವು ಸಂಭವಿಸಿದೆ.

ಕೇರಳದ ಸಚಿವರಿಗೂ ಸೋಂಕು
ಕೇರಳದ ಸಚಿವರಾದ ಜೋಸ್ ತೆಟ್ಟಾಯಿಲ್ ಅವರಿಗೆ ಈ ರೋಗ ತಗುಲಿದ್ದು ತಿರುವನಂತಪುರಂನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ