ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ನೆರವನ್ನು ಭಾರತದ ವಿರುದ್ಧ ಬಳಸಿದ್ದು ಹೌದು; ಮುಷ್ (America | Pakistan | Terror | India | Lashkar | Manmohan singh)
 
PTI
ಉಗ್ರರ ವಿರುದ್ಧ ಹೋರಾಡಲು ಅಮೆರಿಕದಿಂದ ಬಂದ ನೆರವನ್ನು ತಾವು ಪಾಕಿಸ್ತಾನ ಅಧ್ಯಕ್ಷರಾಗಿದ್ದ ವೇಳೆ ಭಾರತದ ವಿರುದ್ಧ ಪಾಕ್ ಸೇನೆ ಬಲಪಡಿಸಲು ಬಳಸಿದ್ದು ನಿಜ ಎಂದು ಮೊದಲ ಬಾರಿಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಮೆರಿಕದಿಂದ ಪಡೆಯುತ್ತಿರುವ ಆರ್ಥಿಕ ನೆರವನ್ನು ಪಾಕಿಸ್ತಾನ ಭಾರತದ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಂಸತ್ ಮತ್ತು ಭಾರತ ಈ ಹಿಂದಿನಿಂದಲೂ ಆರೋಪಿಸುತ್ತಲೇ ಬಂದಿವೆ.

ಆದರೆ, ಈ ವಾದವನ್ನು ಪಾಕ್ ತಳ್ಳಿಹಾಕುತ್ತಲೇ ಬಂದಿತ್ತು. ಈಗ ಸ್ವತಃ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ. 'ನಾನು ಹೇಳುತ್ತಿರುವುದು ನಿಜ ಸಂಗತಿಯಿಂದ ಅಮೆರಿಕ ಕೋಪಗೊಂಡರೂ ಚಿಂತೆ ಇಲ್ಲ. ನಿಯಮಗಳನ್ನು ಉಲ್ಲಂಘಿಸಿ ಆರ್ಥಿಕ ನೆರವನ್ನು ಸೇನೆಯ ಬಲವರ್ಧನೆಗೆ ಬಳಸಿಕೊಳ್ಳಲಾಗಿತ್ತು. ಪಾಕಿಸ್ತಾನದ ಹಿತದೃಷ್ಟಿಯಿಂದ ಈ ರೀತಿ ಮಾಡಬೇಕಾಯಿತು' ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಪಾಕಿಸ್ತಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಷರ್ರಫ್, ಗಡಿಪಾರು ಶಿಕ್ಷೆಯಿಂದ ಪಾರಾಗಲು ಯಾವುದೇ ರಾಜೀ ಮಾಡಿಕೊಳ್ಳಲು ಸಿದ್ದ ಎಂದೂ ತಿಳಿಸಿದ್ದಾರೆ. 9/11ಘಟನೆ ನಂತರ ಉಗ್ರರ ಧಮನಕ್ಕೆ ಅಮೆರಿಕಗೆ ಪಾಕಿಸ್ತಾನ ನೆರವು ನೀಡಿರದಿದ್ದರೆ ಅಮೆರಿಕದ ಸೇನಾಪಡೆಗಳು ಪಾಕ್‌ನ ಅಣ್ವಸ್ತ್ರಗಳನ್ನು ದಾಳಿ ಮಾಡಿ ವಶಪಡಿಸಿಕೊಳ್ಳುವ ಸಂಭವ ಇತ್ತು. ಅಲ್ಲದೆ, ಪಾಕ್ ಮೇಲೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸುವ ಸಂಭವ ಇತ್ತು ಎಂದು ಮುಷ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ