ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 107ರ ಮಲಯ ವಧುವಿಗೊಂದು ಹೊಸ ವರಬೇಕಿದೆ! (Malay woman | Marriage | Groom)
 
ನೂರಾ ಏಳರ ಹರೆಯದ ವಧುವಿಗೊಂದು ವರಬೇಕಿದೆ. ಮೊದಲೇ ಹೇಳಿಬಿಡುತ್ತೇವೆ. ವಧುವಿಗೆ ಇದು ಮೊದಲ ಮದುವೆಯಲ್ಲ. ಎರಡನೆಯದ್ದೂ ಅಲ್ಲ, ಇಪ್ಪತ್ತ ಮೂರನೆಯದ್ದು. ಹಾಗಂತ ಈಕೆ ಸದ್ಯಕ್ಕೆ ಪತಿ ರಹಿತಳೂ ಅಲ್ಲ. ಆದರೆ ಪನರ್ವಸತಿ ಕೇಂದ್ರದಿಂದ ಮರಳಿ ಬಂದಬಳಿಕ ತನ್ನ ಹಾಲಿ ಪತಿ ತನ್ನನ್ನು ಸ್ವೀಕರಿಸುತ್ತಾನೋ ಇಲ್ಲವೋ ಎಂಬುದು ಈ ಮುದುಕವ್ವಳ ಭಯ!!

ಮೆಕ್ ವಾಕ್ ಕಂಡೂರ್ ಎಂಬ ಶತಕ ಪೂರೈಸಿರುವ ಮಹಿಳೆ 37ರ ಹರೆಯದ ಮೊಹಮ್ಮದ್ ನೂರ್ ಚೆ ಮೂಸಾ ಎಂಬವರನ್ನು 2005ರಲ್ಲಿ ವಿವಾಹವಾಗಿದ್ದರು. ಈ ಪತಿಯೀಗ ಜುಲೈಯಲ್ಲಿ ಪುನರ್ವಸತಿ ಕೇಂದ್ರವನ್ನು ಸೇರಿದ್ದು, ಇದರಿಂದ ಮರಳಿದ ಬಳಿಕ ತನ್ನಮೇಲೆ ಮಮತೆ ತೋರಲಾರ ಅಥವಾ ಸಂಬಂಧ ಕಡಿದುಕೊಳ್ಳಲು ಮುಂದಾಗಬಹುದು ಎಂಬುದು ಕಂಡೂರ್ ಭಯ. ಡ್ರಗ್ ಎಡಿಕ್ಟ್ ಮೊಹಮ್ಮದ್ ಈ ಚಾಳಿಯಿಂದ ಬಿಡುಗಡೆ ಹೊಂದಲು ಪುನರ್ವಸತಿ ಕೇಂದ್ರ ಸೇರಿದ್ದಾನೆ.

ಟಾಕ್ ವುಕ್ ಎಂಬುದಾಗಿ ಕರೆಯಲ್ಪಡುವ ಈ ಹಿರಿಯ ಮಹಿಳೆಯು ತನ್ನ ಅಭದ್ರತೆಯನ್ನು ತೋಡಿಕೊಂಡಿದ್ದು, ತನಗೆ ಒತ್ತಾಸೆಯಾಗಿ ಗಂಡನೊಬ್ಬ ಬೇಕಾಗಿದ್ದಾನೆಯೇ ಹೊರತು ಮತ್ತೇನಿಲ್ಲ ಎಂಬುದಾಗಿ ತನ್ನ ಅಳಲು ತೋಡಿಕೊಂಡಿದ್ದಾರೆ.

ತನ್ನನ್ನು ಯಾರಾದರೂ ಕೌಲಾಲಂಪುರಕ್ಕೆ ಕರೆದೊಯ್ದರೆ ಹರಿರಾಯದ ಎರಡನೇ ದಿನದಂದು ತಾನು ತನ್ನ ಪತಿ ಮೊಹಮ್ಮದ್ ನೂರ್‌ನನ್ನು ಭೇಟಿಯಾಗಲು ಬಯಸುತ್ತೇನೆ ಎಂಬುದಾಗಿ ವೂಕ್ ಹೇಳಿಕೊಂಡಿದ್ದಾರೆ. ಅವರು ಕಂಪುಂಗ್ ಬುಕಿತ್ ಎಂಬಲ್ಲಿ ವಾಸಿಸುತ್ತಿದ್ದಾರೆ.

"ನೀನಿಲ್ಲದೆ ನಾನು ಏಕಾಂಗಿಯಾಗಿದ್ದೇನೆ ಎಂಬ ನನ್ನ ಭಾವನೆಯನ್ನು ಆತನಿಗೆ ತಿಳಿಯ ಬಯಸುತ್ತೇನೆ. ಆತ ಇದಕ್ಕೆ ಪ್ರತಿಸ್ಪಂದಿಸಿದಲ್ಲಿ ಇನ್ನೊಂದು ಮದುವೆಯ ಕುರಿತು ಚಿಂತಿಸದೆ, ಆತನಿಗಾಗಿ ಕಾಯುತ್ತೇನೆ" ಎಂಬುದಾಗಿ ಈ ವಿವಾಹಾಪೇಕ್ಷಿ ಮಹಿಳೆ ಹೇಳಿದ್ದಾರಂತೆ.

ನಾನೇನು ನಮ್ಮ ಪ್ರಧಾನಿಯಂತಹ ಸುರ ಸುಂದರಾಂಗನನ್ನು ಬಯಸುತ್ತಿಲ್ಲ. ನನಗೆ ವಯಸ್ಸಾಗಿದೆ ಎಂಬುದೂ ನನಗೆ ಗೊತ್ತಿದೆ. ನಾನು ಯುವತಿಯಲ್ಲ ಅಥವಾ ಯಾರನ್ನಾದರೂ ಆಕರ್ಷಿಸುವಂತಹ ದೇಹ ಸೌಂದರ್ಯವೂ ನಂಗಿಲ್ಲ. ಆದರೆ ಜೀವನದ ಸಂಧ್ಯಾಕಾಲದಲ್ಲಿ ಜತೆಗಾರನೊಬ್ಬ ಬೇಕಾಗಿದ್ದಾನೆ ಅಷ್ಟೆ ಎಂಬುದಾಗಿ ಅವರು ತನ್ನ ಮನದಿಂಗಿತವನ್ನು ಬಿಚ್ಚಿಟ್ಟಿದ್ದಾರೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ