ಇಸ್ಲಾಮಾಬಾದ್, ಸೋಮವಾರ, 14 ಸೆಪ್ಟೆಂಬರ್ 2009( 20:29 IST )
ಪಾಕಿಸ್ತಾನದ ಉಗ್ರರ ದಾಳಿಗೆ ತತ್ತರಿಸಿದ ಸ್ವಾತ್ ಕಣಿವೆಯಲ್ಲಿ ಅಮೆರಿಕದ ಚಾಲಕರಹಿತ ವಿಮಾನಗಳ ಕ್ಷಿಪಣಿ ದಾಳಿಯಲ್ಲಿ ಇಬ್ಬರು ವಿದೇಶಿ ಉಗ್ರರು ಸೇರಿದಂತೆ ಎಂಟು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಉಗ್ರರು ಅಡಗಿರುವ ಮಾಹಿತಿಯನ್ನು ಪತ್ತೆ ಹಚ್ಚಿದ ಅಮೆರಿಕ ಸೇನಾಪಡೆಗಳು ಉಗ್ರರು ಅಡಗಿದ್ದ ತಾಣಗಳ ಮೇಲೆ ದ್ರೋಣ್ ವಿಮಾನಗಳಿಂದ ಕ್ಷಿಪಣಿ ದಾಳಿ ನಡೆಸಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೃತರಲ್ಲಿ ಕನಿಷ್ಟ ಇಬ್ಬರು ವಿದೇಶಿ ಅಲ್‌ಕೈದಾ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.