ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನಾ ಸಂಚು; ಬ್ರಿಟನ್‌ನ ಮೂವರಿಗೆ ಜೀವಾವಧಿ (Briton | terror conspiracy | America | al Qaeda)
 
ಉತ್ತರ ಅಮೆರಿಕದ ಟ್ರಾನ್ಸ್‌ಅಟ್ಲಾಂಟಿಕ್ ವಿಮಾನವನ್ನು ಲಿಕ್ವಿಡ್ ಸ್ಫೋಟಕವನ್ನು ಉಪಯೋಗಿಸಿ ಸೆಪ್ಟೆಂಬರ್ 11ರಂತೆ ಭಯೋತ್ಪಾದನಾ ಕೃತ್ಯದ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಬ್ರಿಟನ್ ಪ್ರಜೆಗಳಿಗೆ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

2006ರ ಅಗೋಸ್ಟ್‌ರಂದು ಮಧ್ಯರಾತ್ರಿ ಲಂಡನ್ ಹಿಥ್ರೂ ವಿಮಾನ ನಿಲ್ದಾಣ, ಅಮೆರಿಕ ಮತ್ತು ಕೆನಡಾದಿಂದ ಹೊರಡುವ ಸುಮಾರು 200 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುವ ಏಳು ವಿಮಾನಗಳಲ್ಲಿ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳಲ್ಲಿ ಸ್ಫೋಟಕವನ್ನು ಉಪಯೋಗಿಸಿ ಧ್ವಂಸಗೊಳಿಸುವ ಉದ್ದೇಶವನ್ನು ಈ ಮೂರು ಉಗ್ರರು ಹೊಂದಿದ್ದರು.

ಆದರೆ ಬ್ರಿಟನ್‌ನ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರ ತೀವ್ರ ಶೋಧದ ಒಂದು ತಿಂಗಳ ಬಳಿಕ ಆರೋಪಿಗಳನ್ನು ಸೆರೆ ಹಿಡಿಯಲಾಗಿತ್ತು.

2001 ಸೆಪ್ಟೆಂಬರ್ 11ರಂದು ಐತಿಹಾಸಿಕ ಭಯೋತ್ಪಾದನಾ ಕೃತ್ಯದಂತೆಯೇ ಈ ದುಷ್ಕೃತ್ಯವನ್ನು ನಡೆಸುವ ಉದ್ದೇಶವನ್ನು ಉಗ್ರರು ಹೊಂದಿದ್ದರು ಎನ್ನುವುದು ಸ್ಪಷ್ಟ ಎಂದು ನ್ಯಾಯಾಧೀಶ ರಿಚರ್ಡ್ ಹೆರ್ನಿಕ್ಸ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಲಂಡನ್‌ನ ವೂಲ್‌ವಿಚ್ ಕ್ರೌನ್ ಕೋರ್ಟ್‌ನ ಉನ್ನತ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ 'ಇದೊಂದು ಗುರುತರವಾದ ಮತ್ತು ಪೈಶಾಚಿಕ ಸಂಚು' ಎಂದು ಈ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದರು. ಜೀವಾವಧಿ ಶಿಕ್ಷೆಗೊಳಗಾಗಿರುವ ಮೂವರು ಆರೋಪಿಗಳು ಮುಸ್ಲಿಮರಾಗಿದ್ದಾರೆ.

ಅಬ್ದುಲ್ಲಾ ಅಹ್ಮದ್ (28) ಕನಿಷ್ಠ 40ವರ್ಷ, ಅಸ್ಸಾದ್ ಸಾರ್‌ವರ್ (29) ಸುಮಾರು 36ವರ್ಷ ಹಾಗೂ ತನ್ವೀರ್ ಹುಸ್ಸೈನ್ (28) ಕನಿಷ್ಠ 32ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಪ್ರೆಸ್ ಅಸೋಸಿಯೇಶನ್ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ