ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲೇಷ್ಯಾದಲ್ಲಿ ಭಾರತೀಯರ ಮನೆ ನೆಲಸಮ (Malesia | Kuala Lumpur | India | Court)
 
ಹೆಚ್ಚಾಗಿ ಭಾರತೀಯರೇ ವಾಸವಾಗಿರುವ ಮಲೇಷ್ಯಾದ ಬೈಲಿಫ್ ಹಳ್ಳಿಯಲ್ಲಿನ ಮನೆಗಳನ್ನು ನೆಲಸಮ ಮಾಡಲು ಉತ್ತರ ಪೆನಾಂಗ್ ಕೋರ್ಟ್ ಆದೇಶಿಸಿದೆ.

ಭಾರತೀಯರು ವಾಸವಾಗಿರುವ ಈ ಜಮೀನನ್ನು ಸರ್ಕಾರ 2005ರಲ್ಲಿ ಮಾರಾಟ ಮಾಡಿತ್ತು. ಈ ಜಾಗದಲ್ಲಿ ವಾಸವಾಗಿರುವ ಜನರನ್ನು ಒಕ್ಕಲೆಬ್ಬಿಸಲು ಈಗ ಕೋರ್ಟ್ ಆದೇಶ ನೀಡಿದೆ. ಆದರೆ, ಹಲವು ವರ್ಷಗಳಿಂದ ವಾಸವಾಗಿರುವ ಭಾರತೀಯರು ಇದಕ್ಕೆ ತೀವ್ರ ಪ್ರತಿಭಟನೆ ನಡೆಸಿದ್ದು, ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಕೋರ್ಟ್ ಆದೇಶದಂತೆ ಆ ಜಾಗದಲ್ಲಿ ವಾಸವಾಗಿರುವವರನ್ನು ತೆರವುಗೊಳಿಸುವುದು ಅನಿವಾರ್ಯ ಎಂದಿರುವ ಸರ್ಕಾರ, ಪ್ರತಿಭಟನೆಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ