ಬಾಗ್ದಾದ್, ಮಂಗಳವಾರ, 15 ಸೆಪ್ಟೆಂಬರ್ 2009( 17:11 IST )
ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್ ಅವರತ್ತ ಶೂ ಎಸೆದ ಇರಾಕ್‌ನ ಟೆಲಿವಿಜನ್ ವರದಿಗಾರ ಮುಂತಾಜರ್ ಅಲ್ ಜೈದಿ ಒಂಬತ್ತು ತಿಂಗಳ ಕಾರಗೃಹ ವಾಸದ ನಂತರ ಇಂದು ಬಿಡುಗಡೆಯಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್ 14 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ " ಇದು ವಿದಾಯದ ಮುತ್ತು ನಾಯಿ " ಎಂದು ಕಿರುಚಿ ಬುಷ್ ಅವರತ್ತ ಶೂ ಎಸೆದ ದಿನದಿಂದ ಜೈಲಿನಲ್ಲಿದ್ದ ಜೈದಿಗೆ ಇಂದು ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇರಾಕ್ ನ್ಯಾಯಾಲಯದ ನಿರ್ಧಾರ ಅಖಂಡತೆ ಮತ್ತು ಪ್ರಮಾಣಿಕ ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ.ಯಾವುದೇ ಒತ್ತಡಕ್ಕೆ ಒಳಗಾಗದೆ ಜೈದಿ ವಿರುದ್ಧ ತೀರ್ಪು ನೀಡಲಾಗಿದೆ ಎಂದಜು ಜೈದಿ ಪರ ವಕೀಲ ಧಿಯಾ ಅಲ್ ಸಾದಿ ತಿಳಿಸಿದ್ದಾರೆ.
ವಿದೇಶಿ ಮುಖ್ಯಸ್ಥರನ್ನು ಅವಮಾನಗೊಳಿಸಿದ್ದರಿಂದ ಜೈದಿಗೆ ಆರಂಭದಲ್ಲಿ ಮೂರು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಗಿತ್ತು.ನಂತರ ಮನವಿಯ ಮೇರೆಗೆ ಶಿಕ್ಷೆಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಲಾಗಿತ್ತು. ಆದರೆ ಉತ್ತಮ ನಡತೆಯ ಹಿನ್ನೆಲೆಯಲ್ಲಿ ಶಿಕ್ಷೆಯಲ್ಲಿ ಮತ್ತ,್ಟು ಕಡಿತವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.