ಕಾಠ್ಮಂಡು , ಮಂಗಳವಾರ, 15 ಸೆಪ್ಟೆಂಬರ್ 2009( 17:26 IST )
ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಉಪಪ್ರಧಾನಿ ಪರಮಾನಂದ್ ಝಾ ಅವರ ನಿವಾಸದ ಬಳಿ, ಸತತ ಎರಡನೇ ದಿನವೂ ಮತ್ತಷ್ಟು ಬಾಂಬ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏತನ್ಮಧ್ಯೆ ,ಭಧ್ರತಾ ಪಡೆಗಳು ಮತ್ತಷ್ಟು ಬಾಂಬ್‌ಗಳನ್ನು ಪತ್ತೆ ಮಾಡಿ ಸ್ಫೋಟಕ್ಕೆ ಮುನ್ನ ಅವುಗಳನ್ನು ನಿಷ್ಕ್ರೀಯಗೊಳಿಸಿದರು ಎಂದು ಝಾ ಅವರ ವಕ್ತಾರರು ತಿಳಿಸಿದ್ದಾರೆ.
ಅಗಸ್ಟ್ 28 ರಂದು ಝಾ ಅವರ ನಿವಾಸದ ಬಳಿ ಬಾಂಬ್ ಸ್ಫೋಟಗೊಂಡು ಕಿರಾಟ್ ರಿಪಬ್ಲಿಕನ್ ವರ್ಕರ್ಸ್ ಪಾರ್ಟಿಯ ಒಬ್ಬ ಮುಖಂಡ ಗಾಯಗೊಂಡಿದ್ದರು. ಸ್ಫೋಟಕ್ಕೆ ತಾವು ಹೊಣೆಗಾರರು ಎಂದು ಉಗ್ರಗಾಮಿ ತಂಡವೊಂದು ಹೇಳಿಕೆ ನೀಡಿತ್ತು.ಝಾ ಅವರ ನಿವಾಸದ ಬಳಿ ಐದನೇ ಬಾರಿಗೆ ಬಾಂಬ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದನ್ನು ಅಕ್ಷೇಪಿಸಿದ ನ್ಯಾಯಾಲಯ, ನೇಪಾಳಿ ಭಾಷೆಯಲ್ಲಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸದಿದ್ದಲ್ಲಿ ಹುದ್ದೆಯನ್ನು ತೊರೆಯಲು ಸೂಚಿಸಿ,ಅವರಿಗೆ ನೀಡಿದ ಭಧ್ರತಾ ಮತ್ತಿತರ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯುವಂತೆ ಸರಕಾರಕ್ಕೆ ಆದೇಶಿಸಿತ್ತು. ನ್ಯಾಯಾಲಯದ ಆದೇಶದನ್ವಯ ಝಾ ಅವರ ಭಧ್ರತಾ ಪಡೆ ಹಾಗೂ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗಿದೆ.