ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಂಧಾನ ರಾಜೀನಾಮೆಯಿಂದಾಗಿ ಮುಷ್ ಸುರಕ್ಷಿತ: ಜರ್ದಾರಿ (Pervez Musharraf | Asif Ali Zardari | Pakistan | golf)
 
ಕಳೆದ ವರ್ಷ ರಾಷ್ಟ್ರಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಪರ್ವೇಜ್ ಮುಷ್ರಫ್, ಅವರಿಗೆ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ನಾಯಕರ ಖಾತರಿ ನೀಡಿದ್ದರಿಂದ, ದೇಶದಿಂದ ಸುರಕ್ಷಿತವಾಗಿ ತೆರಳು ಅನುಮತಿ ನೀಡಲಾಗಿದೆ ಎಂದು ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಪ್ರಭಾವಿ ನಾಯಕರ ಖಾತರಿ ಹಾಗೂ ಮಧ್ಯಸ್ಥಿಕೆಯಿಂದಾಗಿ ,ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ರಾಜೀನಾಮೆ ನೀಡಿದ ನಂತರವೂ ಮುಷ್ರಫ್‌ ಅವರಿಗೆ ದೇಶದಿಂದ ಸುರಕ್ಷಿತವಾಗಿ ತೆರಳಲು ಅನುಮತಿ ನೀಡಲಾಗಿದ್ದು, ತಾವು ಕೂಡಾ ಸಂಧಾನದಲ್ಲಿ ಭಾಗಿಯಾಗಿರುವುದಾಗಿ ಜರ್ದಾರಿ ತಿಳಿಸಿದ್ದಾರೆ.

ನಾನು ಕೂಡಾ ಸಂಧಾನದ ಭಾಗವಾಗಿದ್ದೆ. ರಾಷ್ಟ್ರಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮುಷ್ರಫ್ ಗಾಲ್ಫ್ ಪಂದ್ಯಗಳನ್ನು ಆಡುತ್ತಾ ದಿನಗಳನ್ನು ಕಳೆಯಲಿ ಎನ್ನುವುದು ನಮ್ಮ ಬಯಕೆಯಾಗಿತ್ತು ಎಂದು ರಾಷ್ಟ್ರಾಧ್ಯಕ್ಷರ ನಿವಾಸದಲ್ಲಿ ನಡೆದ ಇಫ್ತಾರ್ ಕೂಟದ ನಂತರ ಜರ್ದಾರಿ ಸುದ್ದಿಗಾರರಿಗೆ ವಿವರಣೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಪ್ರಭಾವಿ ನಾಯಕರು ಖಾತರಿ ನೀಡಿ ಸಂಧಾನವನ್ನು ಇತ್ಯರ್ಥಗೊಳಿಸಿದ್ದು, ಅವರು ಕೂಡಾ ಮುಫ್ರಫ್ ಉಳಿದ ಜೀವನವನ್ನು ಗಾಲ್ಫ್ ಆಡುತ್ತಾ ಕಾಲ ಕಳೆಯಲಿ ಎಂದು ನಿರ್ಧರಿಸಿರುವುದಾಗಿ ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ವ್ಯಂಗವಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ