ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಜೆಕ್ಷನ್‌ ಚುಚ್ಚಲು ರಕ್ತನಾಳ ಸಿಗದೆ ತಾತ್ಕಾಲಿಕ ಜೀವದಾನ ಪಡೆದ ಕೈದಿ! (Execution | Unsuitable veins | Ohio prison)
 
ಕಾಲ ಬರದಿದ್ರೆ ಏನೂ ಆಗೋಲ್ಲ. ಇದು ವಿಧಿಯನ್ನು ನಂಬೋರ ಮಾತು. ಅದು ಸುಳ್ಳೊ ಸತ್ಯವೋ ಎಂಬುದು ಅವರವರ ನಂಬುಗೆಗೆ ಬಿಟ್ಟ ವಿಚಾರ. ಆದರೆ ಅಮೆರಿಕದಲ್ಲೊಬ್ಬನ ಮರಣದಂಡನೆ ವಿಶಿಷ್ಟಕಾರಣಕ್ಕಾಗಿ ಮುಂದೂಡಲ್ಪಟ್ಟಿದ್ದು, ಸದ್ಯಕ್ಕೆ ಆತನಿಗೆ ಒಂದು ವಾರ ಜೀವದಾನ ಲಭಿಸಿದೆ.

ರೊಮೇಲ್ ಬ್ರೂಮ್ ಎಂಬಾತ ಅತ್ಯಾಚಾರಿ ಹಾಗೂ ಕೊಲೆಗಡುಕ. 53ರ ಹರೆಯದ ಈತನಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ ಅದನ್ನು ಜಾರಿಗೆ ತರುವ ಸಂದರ್ಭದಲ್ಲಿ ಔಷಧಿಯನ್ನು ದೇಹದೊಳಗೆ ಸೇರಿಸಲು ಸೂಕ್ತ ರಕ್ತನಾಳ ಪತ್ತೆಯಾಗದ ಕಾರಣ ಶಿಕ್ಷೆ ಮುಂದೂಡಲ್ಪಟ್ಟಿದೆ. ಮುಂದೇನು ಎಂಬುದನ್ನು ಒಹಿಯೋ ಜೈಲು ಅಧಿಕಾರಿಗಳು ಪತ್ತೆ ಮಾಡಬೇಕಿದೆ.

ದೇಹದೊಳಗೆ ವಿಷಕಾರಿ ಔಷಧವನ್ನು ಇಂಜೆಕ್ಷನ್ ಮೂಲಕ ನೀಡುವ ಮೂಲಕವೇ ಮರಣದಂಡನೆ ವಿಧಿಸಬೇಕು ಎಂಬುದಾಗಿ ಅಲ್ಲಿನ ಕಾನೂನು ಹೇಳುತ್ತದೆ. ಇಂತಹ ಸಮಸ್ಯೆ ಎದುರಾಗಿರುವುದು ಇದೇ ಮೊದಲಾಗಿದೆ ಎಂದು ಜೈಲಿನ ವಕ್ತಾರೆ ಜೂಲಿ ವಾಲ್ಬರ್ನ್ ಹೇಳುತ್ತಾರೆ. ರೇಪಿಸ್ಟ್ ಹಾಗೂ ಮರ್ಡರರ್ ಆಗಿರುವ ಬ್ರೂಮ್‌ನ ಜೀವತೆಗೆಯುವುದೀಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

1984ರಲ್ಲಿ 14ರ ಹರೆಯದ ಬಾಲಕಿಯೊಬ್ಬಳ ಮೇಳೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಕಾರಣಕ್ಕಾಗಿ ಬ್ರೂಮ್‌ಗೆ ಮರಣದಂಡನೆ ವಿಧಿಸಲಾಗಿದೆ. ಈತನ ಅಂತ್ಯವನ್ನು ಕಾಣಲು ಬಾಲಕಿಯ ಕುಟುಂಬಿಕರು ಬಂದಿದ್ದರು. ಇಂಜೆಕ್ಷನ್ ನೀಡಲು ವಿಫಲವಾಗಿರುವ ವಿಚಾರ ತಿಳಿದ ಅವರು ಭಾವೋದ್ವೇಗಕ್ಕೆ ಒಳಗಾದರು.

ಅಂದಹಾಗೆ, ಇಂಜಕ್ಷನ್ ನೀಡುವ ವೇಳೆ ಓಹಿಯೋ ಜೈಲಿನಲ್ಲಿ ಸಮಸ್ಯೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2006ರಲ್ಲಿ ಜೋಸೆಫ್ ಕ್ಲರ್ಕ್ ಎಂಬಾತ ತನಗೆ ಪ್ರಜ್ಞೆತಪ್ಪಲು ನೀಡಿರುವ ಔಷಧಿಯು ಫಲನೀಡಿಲ್ಲ ಎಂಬುದನ್ನು ಹೇಳಲು ಎದ್ದು ಕುಳಿತಿದ್ದ. ಜೀವ ತೆಗೆಯುವ ಇಂಜೆಕ್ಷನ್ ಡೋಸ್ ನೀಡುವ ಮುಂಚಿತವಾಗಿ ಮೊದಲಿಗೆ ಅವರನ್ನು ಪ್ರಜ್ಞೆ ತಪ್ಪಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ