ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷರ್ರಫ್ ವಿರುದ್ಧ ಕ್ರಮಕ್ಕೆ ಅಮೆರಿಕ ಮೀನಮೇಷ (America | Pakistan | Terror | India | Lashkar | Manmohan singh)
 
PTI
ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹದ ಸಲುವಾಗಿ ಅಮೆರಿಕದಿಂದ ದೊರೆತ ರಕ್ಷಣಾ ನೆರವನ್ನು ಭಾರತದ ವಿರುದ್ಧ ರಕ್ಷಣಾ ಪಡೆಗಳ ವೃದ್ಧಿಗಾಗಿ ಬಳಸಿಕೊಂಡಿದ್ದನ್ನು ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಒಪ್ಪಿಕೊಂಡಿರುವುದನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿದ್ದರೂ ಸಹ ಈ ಬಗ್ಗೆ ಯಾವುದೇ ತನಿಖೆ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ.

'ಪಾಕಿಸ್ತಾನದ ಮಾಜಿ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ. ಆದರೆ ಈಗಿನ ಈ ಆರೋಪಗಳನ್ನು ಸಾಬೀತುಪಡಿಸುವಂತಹ ವಿವರಗಳು ನಮ್ಮ ಬಳಿ ಇಲ್ಲ. ಆದರೆ ನೆರವನ್ನು ದುರ್ಬಳಕೆ ಮಾಡಿಕೊಂಡಿದ್ದರ ಸ್ಪಷ್ಟ ನಿದರ್ಶನ ಇಲ್ಲ. ಇಂತಹ ಉಲ್ಲಂಘನೆ ಬಗ್ಗೆ ಅಮೆರಿಕಕ್ಕೆ ಯಾವುದೇ ಮಾಹಿತಿ ಇಲ್ಲ' ಎಂದು ವಿದೇಶಾಂಗ ಇಲಾಖೆ ವಕ್ತಾರ ಇಯಾನ್ ಕೆಲ್ಲಿ ತಿಳಿಸಿದರು.

ಪಾಕಿಸ್ತಾನದ ಸುದ್ದಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದ ಮುಷ್, ಅಮೆರಿಕದ ಸೇನಾ ನೆರವನ್ನು ಬಳಸುವ ಸಂಬಂಧ ಇರುವ ನಿಯಮಗಳನ್ನು ನಾವು ಉಲ್ಲಂಘಿಸಿದ್ದರೂ, ಪಾಕಿಸ್ತಾನದ ಹಿತಾಸಕ್ತಿಯಿಂದ ತಾವು ಒಳ್ಳೆಯ ಕೆಲಸವನ್ನೇ ಮಾಡಿದ್ದಾಗಿ ಹೇಳಿದ್ದರು.

ಮುಷರ್ರಫ್ ಹೇಳಿಕೆಯ ಹಿನ್ನೆಲೆಯಲ್ಲಿ ತನಿಖೆ ಸಡಿಲಿಸಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಯಿಂದ ಜಾರಿಕೊಳ್ಳಲು ಯತ್ನಿಸಿದ ವಕ್ತಾರರು, ಮುಖ್ಯವಾಗಿ ಮುಷ್ ಈಗ ಖಾಸಗಿ ವ್ಯಕ್ತಿ. ಅವರು ಸ್ವಲ್ಪ ಮಾಹಿತಿಯನ್ನಷ್ಟೇ ನೀಡಿದ್ದಾರೆ ಎಂದರು. ಹೀಗಾಗಿ ಅವರಿಂದ ಇನ್ನಷ್ಟು ಮಾಹಿತಿಯನ್ನು ನಾವು ನಿಮ್ಮ ಮೂಲಕ ಪಡೆಯಲು ಇಚ್ಚಿಸುತ್ತೇವೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ