ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಾಕ್ಸನ್ ತನ್ನ ಜೀವನ ಚರಿತ್ರೆ ಪುಸ್ತಕ ಬರೆದಿದ್ದರು? (michael jakson | America | autobiography | Jakson)
 
PTI
ಇತ್ತೀಚೆಗಷ್ಟೇ ನಿಧನರಾದ ಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್ ರಹಸ್ಯವಾಗಿ ಪುಸ್ತಕ ಬರೆದಿದ್ದರೇ? ಜಾಕ್ಸನ್ ಬರೆದಿರುವ ಪುಸ್ತಕದ ಮುದ್ರಣದ ಹಕ್ಕುಗಳಿಗಾಗಿ ಪ್ರಕಾಶಕರ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ ಎಂದು ವರದಿಯಾಗಿದೆ.

ಜಾಕ್ಸನ್, ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅನುಭವಿಸಿದ ಹಣಕಾಸು ತೊಂದರೆ, ಕಷ್ಟ ಕಾರ್ಪಣ್ಯಗಳನ್ನು ಯಾವಾಗ ಪುಸ್ತಕ ರೂಪದಲ್ಲಿ ಬರೆದಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಎಸ್ಸೆನ್ಸ್.ಕಾಮ್ ವರದಿ ತಿಳಿಸಿದೆ.

ಹೆಸರಿಡದ ಈ ಪುಸ್ತಕ ಜಾಕ್ಸನ್ ಜೀವನ, ಸ್ವಯಂ ಆಗಿ ಹೇರಿಕೊಂಡಿದ್ದ ಏಕಾಂತತೆಯ ಕನ್ನಡಿಯಾಗಿದೆ ಎಂದು ವೆಬ್‌ಸೈಟ್‌ನ ಮೂಲವೊಂದು ಹೇಳಿದೆ. ಜಾಕ್ಸನ್ ಮೊದಲಿಗೆ ಕಥಾವಸ್ತು ಮತ್ತು ಅಂಕಿ-ಅಂಶಗಳನ್ನು ಪರಿಕಲ್ಪಿಸಿ ಬಳಿಕ ಸಹಾಯಕನ ನೆರವಿನಿಂದ ಘಟನೆಗಳನ್ನು ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ