ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಲ್ಟಾ ಹೊಡೆದ ಮುಷ್; ಆರ್ಥಿಕ ನೆರವು ದುರ್ಬಳಕೆ ಮಾಡಿಲ್ಲ (Musharraf | US | Pakistan | ISI | Dawn website)
 
PTI
'ತಾನು ಅಧಿಕಾರದಲ್ಲಿದ್ದಾಗ ಅಮೆರಿಕದಿಂದ ಬಂದ ನೆರವನ್ನು ಭಾರತದ ವಿರುದ್ಧ ಪಾಕ್ ಸೇನೆ ಬಲಪಡಿಸಲು ಬಳಸಿದ್ದು ನಿಜ ಎಂಬ ಹೇಳಿಕೆಯನ್ನು ನೀಡಿಲ್ಲ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಇದೀಗ ಸ್ಪಷ್ಟನೆ ನೀಡುವ ಮೂಲಕ ಉಲ್ಟಾ ಹೊಡೆದಿದ್ದಾರೆ.

ಈ ಗೊಂದಲದ ಹೇಳಿಕೆ ಕುರಿತು ಫಿಲಡೆಲ್ಫಿಯಾದಿಂದ ಸ್ಪಷ್ಟನೆ ನೀಡಿರುವ ಮುಷ್, ಇದನ್ನು ಭಾರತದ ಕೆಲವು ಮುಖಂಡರು ಹುಟ್ಟುಹಾಕಿದ ವಿವಾದವಾಗಿದೆ ಎಂದು ಆರೋಪಿಸಿರುವ ಅವರು, ಮಾಧ್ಯಮಗಳು ಕೂಡ ತನ್ನ ಸಂದರ್ಶನಕ್ಕೆ ಹೆಚ್ಚಿನ ಒತ್ತು ನೀಡಿಲ್ಲ ಎಂದು ಸ್ಪಷ್ಟನೆ ನೀಡಿರುವುದಾಗಿ ಡಾನ್ ವೆಬ್‌ಸೈಟ್ ವರದಿ ತಿಳಿಸಿದೆ.

ಸಂದರ್ಶನದ ವೇಳೆ ಅಮೆರಿಕದ ಆರ್ಥಿಕ ನೆರವನ್ನು ಉಗ್ರರ ವಿರುದ್ಧ ಧಮನಕ್ಕೆ ಬಳಸಲಾಗಿತ್ತೇ ಎಂಬ ಪ್ರಶ್ನೆಯನ್ನೇ ಕೇಳಿಲ್ಲ ಎಂದು ತಿಳಿಸಿರುವ ಮುಷ್, ಪಾಕಿಸ್ತಾನ ಯಾವುದೇ ಒಪ್ಪಂದವನ್ನು ಉಲ್ಲಂಘಿಸಿತ್ತು ಎಂಬ ಬಗ್ಗೆ ಯಾವತ್ತೂ ಯಾವ ಹೇಳಿಕೆಯನ್ನೇ ನೀಡಿರಲಿಲ್ಲವಾಗಿತ್ತು ಎಂಬುದಾಗಿ ತಿಳಿಸಿದ್ದಾರೆಂದು ವೆಬ್‌ಸೈಟ್ ವರದಿ ಹೇಳಿದೆ.

'ಉಗ್ರರ ವಿರುದ್ಧ ಹೋರಾಡಲು ಅಮೆರಿಕದಿಂದ ಬಂದ ನೆರವನ್ನು ತಾವು ಪಾಕಿಸ್ತಾನ ಅಧ್ಯಕ್ಷರಾಗಿದ್ದ ವೇಳೆ ಭಾರತದ ವಿರುದ್ಧ ಪಾಕ್ ಸೇನೆ ಬಲಪಡಿಸಲು ಬಳಸಿದ್ದು ನಿಜ ಎಂದು ಮೊದಲ ಬಾರಿಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಒಪ್ಪಿಕೊಂಡಿರುವುದಾಗಿ' ಭಾರತದ ಮಾಧ್ಯಮಗಳು ಸೋಮವಾರ ವರದಿ ಮಾಡಿದ್ದವು.

ಪಾಕಿಸ್ತಾನ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾಹಿತಿ ಬಹಿರಂಗಪಡಿಸಿದ್ದರು. 'ನಾನು ಹೇಳುತ್ತಿರುವುದು ನಿಜ ಸಂಗತಿಯಿಂದ ಅಮೆರಿಕ ಕೋಪಗೊಂಡರೂ ಚಿಂತೆ ಇಲ್ಲ. ನಿಯಮಗಳನ್ನು ಉಲ್ಲಂಘಿಸಿ ಆರ್ಥಿಕ ನೆರವನ್ನು ಸೇನೆಯ ಬಲವರ್ಧನೆಗೆ ಬಳಸಿಕೊಳ್ಳಲಾಗಿತ್ತು. ಪಾಕಿಸ್ತಾನದ ಹಿತದೃಷ್ಟಿಯಿಂದ ಈ ರೀತಿ ಮಾಡಬೇಕಾಯಿತು' ಎಂದು ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ