ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದೊಂದಿಗಿನ ಮಾತುಕತೆಗೆ ಹೆಚ್ಚಿನ ನಿರೀಕ್ಷೆ ಬೇಡ:ಖುರೇಶಿ (Shah Mahmood Qureshi | S M Krishna | UN General Assembly | New York)
ಭಾರತದೊಂದಿಗಿನ ಮಾತುಕತೆಗೆ ಹೆಚ್ಚಿನ ನಿರೀಕ್ಷೆ ಬೇಡ:ಖುರೇಶಿ
ಇಸ್ಲಾಮಾಬಾದ್, ಬುಧವಾರ, 16 ಸೆಪ್ಟೆಂಬರ್ 2009( 17:23 IST )
PTI
ಮುಂಬರುವ ದಿನಗಳಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿದ್ದರೂ ಪ್ರಮುಖ ಬದಲಾವಣೆಗಳಾಗುವ ನಿರೀಕ್ಷೆಯಿಲ್ಲ. ಆದರೆ ಪಾಕಿಸ್ತಾನ, ಭಾರತದೊಂದಿಗಿನ ಭಾಂದವ್ಯ ವೃದ್ಧಿಯನ್ನು ಬಯಸುತ್ತದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ವಿದೇಶಾಂಗ ಸಚಿವ ಕೃಷ್ಣ ಅವರನ್ನು ಭೇಟಿಯ ನಂತರ ಹೆಚ್ಚಿನ ಬದಲಾವಣೆಗಳಾಗುವ ನಿರೀಕ್ಷೆಯಿಲ್ಲ. ಬದಲಾವಣೆಗಳಾಗುವ ಬಗ್ಗೆ ನಾನು ಹೆಚ್ಚಿನ ಆಶಾಭಾವನೆಯನ್ನು ಹೊಂದಿಲ್ಲವೆಂದು ತಿಳಿಸಿದ್ದಾರೆ.
ದ್ವಿಪಕ್ಷಿಯ ಸಂಬಂಧಗಳು ಸಕಾರಾತ್ಮಕವಾಗಿ ಸಾಗಲು ಉತ್ತಮ ಸ್ಥಿತಿಯ ನಿರ್ಮಾಣ ಅಗತ್ಯವಾಗಿದೆ. ಆದರೆ ನಮ್ಮಲ್ಲಿರುವ ಸವಾಲುಗಳು ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಖುರೇಶಿ ಅಭಿಪ್ರಾಯಪಟ್ಚಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಸಚಿವ ಕೃಷ್ಣ ಅವರನ್ನು ಸಕಾರಾತ್ಮಕ ಭಾವನೆಯಿಂದ ಭೇಟಿ ಮಾಡಿ, ವಾಸ್ತವ ಸಂಗತಿಗಳನ್ನು ಅವರ ಮುಂದಿಡುತ್ತೇನೆ. ಅವರಿಗೆ ಪಾಕಿಸ್ತಾನ ಜನತೆಯ ಭಾವನೆಗಳ ಬಗ್ಗೆ ಮಾಹಿತಿ ನೀಡುವುದಾಗಿ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹೇಳಿದ್ದಾರೆ.