ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪರಮಾಣು ರಹಸ್ಯ ಪಡೆಯಲು ಆಲ್‌ಕೈದಾ ಸಂಚು: ರಿಚರ್ಡ್ (Al-Qaida | Pakistan | Afghanistan | Richard Holbrooke | US Representative | Capitol Hill)
ವಾಷಿಂಗ್ಟನ್, ಬುಧವಾರ, 16 ಸೆಪ್ಟೆಂಬರ್ 2009( 17:45 IST )
ಜಾಗತಿಕ ಉಗ್ರಗಾಮಿ ಸಂಘಟನೆಯಾದ ಆಲ್‌ಕೈದಾ ಪಾಕಿಸ್ತಾನದಿಂದ ಪರಮಾಣು ರಹಸ್ಯ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದು, ಹಿಂದಿನಂತೆಯೇ ಅಪಾಯಕಾರಿಯಾಗಿ ಉಳಿದಿದೆ ಎಂದು ಪಾಕಿಸ್ತಾನ ಮತ್ತು ಅಫಘಾನಿಸ್ಥಾನ ದೇಶಗಳ ಅಮೆರಿಕದ ವಿಶೇಷ ರಾಯಭಾರಿಯಾದ ರಿಚರ್ಡ್ ಹೊಲ್‌ಬ್ರೊಕ್ ಹೇಳಿದ್ದಾರೆ.
ಆಲ್ ಕೈದಾ ಭಯೋತ್ಪಾದಕ ಸಂಘಟನೆ ಅಪಾಯಕಾರಿಯಾಗಿ ಮುಂದುವರಿದಿದ್ದು, ಅಮೆರಿಕದ ಮೇಲೆ ದಾಳಿ ಮಾಡುವಂತೆ ಸಾರ್ವಜನಿಕವಾಗಿ ನಾಗರಿಕರನ್ನು ಒತ್ತಾಯಿಸುತ್ತಿದೆ. ಪರಮಾಣು ವಿಜ್ಞಾನಿಗಳಿಗೆ ಪರಮಾಣು ರಹಸ್ಯ ಮಾಹಿತಿ ನೀಡುವಂತೆ ಸಾರ್ವಜನಿಕವಾಗಿ, ಬಹಿರಂಗವಾಗಿ ಬೆದರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಫಘಾನಿಸ್ಥಾನ ಮತ್ತು ಪಾಕಿಸ್ತಾನ ದೇಶಗಳಲ್ಲಿ ವಿಶೇಷ ರಾಯಭಾರಿಯಾಗಿರುವ ಬ್ರೊಕ್, ಅಫಘಾನಿಸ್ಥಾನದಲ್ಲಿ ಚುನಾವಣೆಗಳನ್ನು ಬೆಂಬಲಿಸಲು ಅಮೆರಿಕ ಬಯಸಿಲ್ಲ. ಆದರೆ ರಾಷ್ಟ್ರದ ಹಿತಾಸಕ್ತಿ ಹಾಗೂ ಭಧ್ರತೆಯನ್ನು ನೀಡಲು ಮಾತ್ರ ಅಮೆರಿಕ ಅಫಘಾನಿಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು.
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಅಫಘಾನಿಸ್ಥಾನದಲ್ಲಿ ಕೇವಲ ಸೇನಾಪಡೆಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಅದರ ಜೊತೆಗೆ ಪಾಕಿಸ್ತಾನ, ಅಫಘಾನಿಸ್ಥಾನ ದೇಶಗಳಿಗೆ ನೀಡುತ್ತಿರುವ ನೆರವನ್ನು ಕೂಡಾ ಹೆಚ್ಚಿಸಿದ್ದಾರೆ ಎಂದು ರಿಚರ್ಡ್ಸ್ ತಿಳಿಸಿದ್ದಾರೆ.