ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷ್ರಫ್ ಹೇಳಿಕೆಗೆ ಪಾಕ್ ಸರಕಾರ ಆಕ್ರೋಶ (:Pak | govt, | Attacks | Mush | US | Aid | Diversion | Remark)
 
ಭಯೋತ್ಪಾದನೆ ನಿಗ್ರಹಕ್ಕಾಗಿ ಅಮೆರಿಕ ನೀಡಿದ ನೆರವನ್ನು ಭಾರತದ ವಿರುದ್ಧ ಬಳಸಿಕೊಳ್ಳಲಾಯಿತು ಎನ್ನುವ ಮಾಜಿ ರಾಷ್ಟ್ರಾಧ್ಯಕ್ಷ ಮುಷ್ರಫ್ ಅವರ ಹೇಳಿಕೆಯನ್ನು ಖಂಡಿಸಿದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ,ಇಂತಹ ಹೇಳಿಕೆಗಳನ್ನು ನೀಡಿ ದೇಶದ್ರೋಹಿ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರತಿಕೆಗಳಲ್ಲಿ ಪ್ರಕಟವಾದಂತೆ ಮುಷ್ರಫ್ ಹೇಳಿಕೆ ನೀಡಿದ್ದರೇ ಅವರು ಪಾಕಿಸ್ತಾನಕ್ಕೆ ಯಾವುದೇ ರೀತಿಯ ಸೇವೆಯನ್ನು ಮಾಡಿಲ್ಲ.ಪಾಕಿಸ್ತಾನವನ್ನು ಬಲಪಡಿಸಲೂ ಇಲ್ಲ ಎಂದು ಸಚಿವ ಖುರೇಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಗ್ರರ ದಮನಕ್ಕಾಗಿ ಅಮೆರಿಕ ನೀಡಿದ ನೆರವನ್ನು ತಮ್ಮ ಅಧಿಕಾರವಧಿಯಲ್ಲಿ ಪಾಕಿಸ್ತಾನವನ್ನು ಬಲಪಡಿಸಲು ಭಾರತದ ವಿರುದ್ಧ ಬಳಸಿಕೊಳ್ಳಲಾಗಿದೆ ಎನ್ನುವ ಮುಷ್ರಫ್ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಇತ್ತೀಚೆಗೆ ಪಾಕಿಸ್ತಾನದ ಸುದ್ದಿ ಚಾನೆಲ್‌ಗೆ ಸಂದರ್ಶನ ನೀಡಿದ ಪಾಕ್‌ನ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ,ತಮ್ಮ ಅಧಿಕಾರದ ಅವಧಿಯಲ್ಲಿ ಸರಕಾರದ ಕಾನೂನುಗಳನ್ನು ಉಲ್ಲಂಘಿಸಿ, ಉಗ್ರರ ದಮನಕ್ಕಾಗಿ ಅಮೆರಿಕ ನೀಡಿದ ಆರ್ಥಿಕ, ಶಸ್ತ್ರಾಸ್ತ್ರ ನೆರವನ್ನು ಭಾರತದ ವಿರುದ್ಧ ಪಾಕಿಸ್ತಾನವನ್ನು ಬಲಪಡಿಸಲು ಬಳಸಿಕೊಳ್ಳಲಾಗಿದೆ. ಆದರೆ ಪಾಕಿಸ್ತಾನದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಮುಷ್ರಫ್ ಅವರ ಹೇಳಿಕೆಯ ನಂತರ, ಭಾರತ ಪ್ರಕಟಣೆಯೊಂದನ್ನು ಹೊರಡಿಸಿ ಮುಷ್ರಫ್ ಹೇಳಿಕೆಯಿಂದ ಆಶ್ಚರ್ಯವಾಗಿಲ್ಲ.ನಿರೀಕ್ಷಿತವಾಗಿದೆ. ಹಲವು ವರ್ಷಗಳಿಂದ ಪಾಕ್ ಅಮೆರಿಕದ ನೆರವನ್ನು ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ನವದೆಹಲಿಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ