ಅಚ್ಚರಿಯ ಶಸ್ತ್ರಕ್ರಿಯೆಯೊಂದರಲ್ಲಿ ಮಹಿಳೆಯ ಹೃದಯದಲ್ಲಿ ಸಿಲುಕಿದ್ದ ಮೂರು ಸೂಜಿಗಳನ್ನು 23 ವರ್ಷಗಳ ಬಳಿಕ ವೈದ್ಯರು ಹೊರತೆಗೆದಿರುವ ಘಟನೆ ಚೀನದ ಹೆನನ್ ಪ್ರಾಂತ್ಯದಲ್ಲಿ ಸಂಭವಿಸಿದೆ.
ಹೆನನ್ ಪ್ರಾಂತ್ಯದ ರಾಜಧಾನಿಯಾಗಿರುವ ಜೆಂಗ್‌ಜವೋದಲ್ಲಿ ವೈದ್ಯರು ಈ ಅಪರೂಪದ ಶಸ್ತ್ರಕ್ರಿಯೆ ನಡೆಸಿದ್ದು, ಜಿಯಾಂಗ್ ಎಂಬ ಮಹಿಳೆಯ ಹೃದಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಲ್ಕು ಸೆಂಟಿಮೀಟರ್‌ನ ಮೂರು ಸೂಜಿಗಳನ್ನು ಹೊರತೆಗೆದಿದ್ದಾರೆ ಎಂಬುದಾಗಿ ಚೀನ ದೈನಿಕ ವರದಿ ಮಾಡಿದೆ.
ಕಸೂತಿ ಪ್ರಿಯೆಯಾಗಿರುವ 44ರ ಹರೆಯದ ಜಿಯಾಂಗ್‌ಗೆ ತಾನು ಸೂಚಿಯನ್ನು ನುಂಗಿರುವ ವಿಚಾರವಾಗಲಿ ಅಥವಾ ಈ ಸೂಜಿಗಳು ತನ್ನ ಹೃದಯದಲ್ಲಿ ಸಿಲುಕಿರುವ ವಿಚಾರವಾಗಲಿ ತಿಳಿದೇ ಇರಲಿಲ್ಲ.
ಕಳೆದ ತಿಂಗಳು ಆಕೆ ಮಾಮೂಲಿ ತಪಾಸಣೆಗೆ ತೆರಳಿದ್ದ ವೇಳೆ ಈಕೆಯ ಹೃದಯದಲ್ಲಿದ್ದ ಸೂಜಿಯನ್ನು ವೈದ್ಯರು ಪತ್ತೆ ಮಾಡಿದ್ದರು.