ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವದಲ್ಲೇ ಅತೀ ಎತ್ತರದ ಈ ಸುಲ್ತಾನನಿಗೆ ಪ್ರೀತಿಯದ್ದೇ ಚಿಂತೆ! (Turkey | crown | tallest man | London)
 
ಟರ್ಕಿಯ ಸುಲ್ತಾನ ಕೋಸೇನ್ಎಂಬ 26ರ ಹರೆಯದ ಯವಕ ವಿಶ್ವದ ಅತೀ ಎತ್ತರದ ವ್ಯಕ್ತಿ ಎಂಬ ಮನ್ನಣೆಗೆ ಭಾಜನವಾಗಿದ್ದಾರೆ. ಇವರ ಎತ್ತರ 8.1 ಅಡಿ, ಅಂದರೆ 2.46 ಮೀಟರ್. ಯಾವುದೇ ಗುಂಪಿನಲ್ಲಿದ್ದರೂ ಎದ್ದು ತೋರುವ ಈತ ಇದೀಗ ಪ್ರಥಮ ಬಾರಿಗೆ ಟರ್ಕಿಯಿಂದ ಲಂಡನ್‌ನತ್ತ ಪಯಣ ಬೆಳೆಸಲಿದ್ದಾರೆ.

ವಿಶ್ವದಲ್ಲೇ ಇದುವರೆಗೆ 8 ಅಡಿಗಳ ಎತ್ತರ ದಾಖಲಿಸಿರುವ ಕೇವಲ 10 ವ್ಯಕ್ತಿಗಳಲ್ಲಿ ಇವರು ಒಬ್ಬರು. ಚೀನದ 7 ಅಡಿ 8.95 ಅಂಗುಲ ಎತ್ತರದ ಬಾವೊ ಕ್ಸಿ ಶುನ್ ಎಂಬಾತನಿಂದ ಈ ಪ್ರಶಸ್ತಿಯನ್ನು ಕಸಿದಿದ್ದಾರೆ. ಉಕ್ರೇನ್‌ನ ಲಿಯೋನಿಡ್ ಸ್ಟಡಿಂಕ್ ಎಂಬಾತ ತಾನು 8 ಅಡಿ 5.5 ಅಂಗುಲ ಎತ್ತರವಿದ್ದೇನೆ ಎಂದು ಹೇಳಿಕೊಂಡಿದ್ದರೂ, ಆತ ವೈಯಕ್ತಿಕ ಅಳತೆ ನಿರಾಕರಿಸಿದ್ದ ಕಾರಣ ಶುನ್ ಈ ಪ್ರಶಸ್ತಿ ಪಡೆದಿದ್ದರು.

ಕೊಸೇನ್‌ಗೆ ತನ್ನ ಈ ಎತ್ತರದಿಂದ ಅನುಕೂಲಗಳೂ ಇವೆ ಹಾಗೂ ಅನಾನುಕೂಲಗಳೂ ಇವೆ. ತನ್ನ ಮನೆಯಲ್ಲಿ ಬಲ್ಬ್ ಹಾಗೂ ದೀಪಗಳನ್ನು ಬದಲಿಸುವುದು, ಕಿಟಿಕಿ ಪರದೆ ಜೋಡಿಸುವುದು ಮುಂತಾದ ಕೆಲಸಗಳನ್ನು ಕಷ್ಟವಿಲ್ಲದೆ ತನ್ನ ತಾಯಿಗೆ ಮಾಡಿಕೊಡುವುದಾಗಿ ಅವರು ಹೇಳುತ್ತಾರೆ. ಆದರೆ, ಅವರ ಅಳತೆಗೆ ತಕ್ಕುತಾದ 36.5 ಸೆಂಟಿಮೀಟರ್(14.4ಇಂಚು) ಬೂಟುಗಳು, ದೊಡ್ಡ ಅಳತೆಯ ಉಡುಪುಗಳು ಸಿಗುವುದಿಲ್ಲ ಎಂಬುದು ಅವರ ಕೊರಗು.

ಇವರು ತೂರಿಕೊಳ್ಳುವಂತ ಗಾತ್ರದ ಕಾರು ಸಿಕ್ಕಿದ ಬಳಿಕ ಅವರ ಮುಂದೆ ಇರುವ ಇನ್ನೊಂದು ಪ್ರಶ್ನೆ ರೊಮಾನ್ಸ್. "ತಾನು ಪ್ರೀತಿಯನ್ನು ಎದುರುನೋಡುತ್ತಿದ್ದೇನೆ. ವಿವಾಹಿತನಾಗಿ ಮಕ್ಕಳನ್ನು ಹೊಂದುವುದು ತನ್ನ ಅತಿದೊಡ್ಡ ಕನಸು" ಎಂಬುದಾಗಿ ಆತ ಸುದ್ದಿಗಾರರೊಂದಿಗೆ ಹೇಳಿಕೊಂಡಿದ್ದಾನೆ.

2010ರ ಗಿನ್ನೆಸ್ ವಿಶ್ವದಾಖಲೆಗಳ ಆವೃತ್ತಿಯ ಬಿಡುಗಡೆಗಾಗಿ ಕೋಸೆನ್ ಲಂಡನ್‌ನತ್ತ ಹೊರಟಿದ್ದಾರೆ. ಈ ಪುಸ್ತಕದಲ್ಲಿ ಇವರೊಂದಿಗೆ ಇತರರ ಹೆಸರೂ ದಾಖಲಾಗಲಿದೆ. ದೇಹದಲ್ಲಿ ಅತಿಹೆಚ್ಚು ಚುಚ್ಚಿಸಿಕೊಂಡಿರುವ ಬ್ರಿಟನ್ನಿನ 78ರ ಹರೆಯದ ಮಾಜಿ ಬ್ಯಾಂಕ್ ಮ್ಯಾನೇಜರ್ ಜಾನ್ ಲಿಂಚ್ ಹಾಗೂ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಮಾರ್ಕ್ ಜುಕರ್‌ಮನ್ ಅವರುಗಳ ಹೆಸರೂ ದಾಖಲಾಗಲಿದೆ. ಫೇಸ್‌ಬುಕ್‌ನ ಸ್ಥಾಪಕನಾಗಿರುವ ಮಾರ್ಕ್ ತನ್ನ 23 ವರ್ಷದಲ್ಲೇ ಬಿಲಿಯನೇರ್ ಆಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ