ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾ-ಚೀನಾ-ಉ.ಕೊರಿಯ 'ಅಮೆರಿಕಕ್ಕೆ ಸಿಂಹಸ್ವಪ್ನ' (America | South koria | China | Russia | Iran)
 
ND
ಭಯೋತ್ಪಾದನೆಯ ಸಮಸ್ಯೆಯ ಜತೆಗೆ ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕಕ್ಕೆ ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಇರಾನ್ ದೇಶ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬ ಅಂಶ ಬಯಲಾಗಿದೆ.

ಅಮೆರಿಕದ ಹಿತಾಸಕ್ತಿಗಳಿಗೆ ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಇರಾನ್ ದೇಶಗಳು ಅಪಾಯಕಾರಿಯಾಗಿವೆ ಎಂದು ಅಮೆರಿಕದ ಉನ್ನತ ಮಟ್ಟದ ಗುಪ್ತಚರ ಸಂಸ್ಥೆ ವರದಿ ತಿಳಿಸಿದೆ.

ತನ್ನ ಪರಮಾಣು ಶಸ್ತ್ರ ತಯಾರಿ ವಿರುದ್ಧ ವಿಶ್ವದ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಇನ್ನೂ ಹೆಚ್ಚು ಹಠ ತೊಟ್ಟು ಗುರಿ ಈಡೇರಿಸಿಕೊಳ್ಳುತ್ತಿರುವ ಇರಾನ್ ಮತ್ತು ಉತ್ತರ ಕೊರಿಯಾ ದೇಶಗಳ ಬಗ್ಗೆ ಅಮೆರಿಕಕ್ಕೆ ಹೊಸ ಭಯ ಆರಂಭವಾಗಿದೆ. ಪರಮಾಣು ಶಕ್ತ ಇರಾನ್ ದೇಶವು ಉಗ್ರಗಾಮಿ ಶಕ್ತಿಗಳ ಜೊತೆ ಕೈ ಜೋಡಿಸಿದರೆ ತನಗೆ ಅತ್ಯಂತ ಅಪಾಯ ಸ್ಥಿತಿ ಎದುರಾಗುತ್ತದೆ ಎಂಬುದು ಅಮೆರಿಕದ ನಿಲುವು.

ಅದೇ ರೀತಿ ಭವಿಷ್ಯದ ಸೂಪರ್ ಪವರ್ ಎಂದೇ ಪರಿಗಣಿತವಾಗಿರುವ ಚೀನಾ ಅನೇಕ ವಿಷಯಗಳಲ್ಲಿ ಬಹಳಷ್ಟು ಮುಂದುವರಿದಿದೆ. ಆದರೆ ಮಿಲಿಟರಿ ಸಾಮರ್ಥ್ಯ ಅಮೆರಿಕಕ್ಕೆ ಸೆಡ್ಡು ಹೊಡೆಯುವಷ್ಟು ಆಧುನೀಕರಣಗೊಂಡಿದೆ. ರಷ್ಯಾ ಕೂಡ ಆರಂಭದಿಂದಲೂ ಅಮೆರಿಕಕ್ಕೆ ಸಾಂಪ್ರದಾಯಿಕ ಶತ್ರು ದೇಶ. ಆ ನಿಟ್ಟಿನಲ್ಲಿ ಅಮೆರಿಕ ಸಾಕಷ್ಟು ಚಿಂತನೆ ನಡೆಸಬೇಕು ಎಂದು ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ