ಮುತ್ತಿನ ಮತ್ತೇ ಅಪಘಾತದ ಆಪತ್ತು
ಕ್ಲೆಸ್ವಿಲ್ಲೆ, ಗುರುವಾರ, 17 ಸೆಪ್ಟೆಂಬರ್ 2009( 12:43 IST )
ಪ್ರೇಯಿಸಿಗೆ ಮುತ್ತು ನೀಡುವಾಗ ಮದವೇರಿ, ಕಾರು ಚಾಲನೆಯನ್ನು ಮರೆತುಹೋದ ಚಾಲಕನಿಂದಾಗಿ ಅಪಘಾತವಾಗಿ, ಐವರು ಗಾಯಗೊಂಡಿರುವ ಘಟನೆ, ಆಗ್ನೇಯ ಭಾಗದಲ್ಲಿರುವ ಪೆನ್ಸೆಲ್‌ವೇನಿಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಾಷಿಂಗ್ಟನ್ ಬಳಿಯಿರುವ ಡೊನೆಗಲ್ ಟೌನ್‌ಷಿಪ್ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಅಪಘಾತ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಮಗೆ ಮುತ್ತಿನ ಮದವೇರಿಲ್ಲ. ನನ್ನನ್ನು ಮದುವೆಯಾಗುವಂತೆ ಅವಳ ಮುಂದೆ ಪ್ರಸ್ತಾಪಿಸಿದೆ ಅಷ್ಟೆ ಎಂದು ಕಾರು ಚಾಲಕ ಹೇಳಿಕೆ ನೀಡಿದ್ದಾನೆ.
ಪಹರೆಯಲ್ಲಿದ್ದ ಪೊಲೀಸ್ ಅಧಿಕಾರಿ ರೊಡ್ ಬುಷ್ ಮಾತನಾಡಿ , ವಾಹನದ ಚಾಲಕ ಹಾಗೂ ಮಹಿಳೆ ಪರಸ್ಪರ ದೀರ್ಘ ಚುಂಬನದಲ್ಲಿ ತೊಡಗಿ ಸ್ವರ್ಗಸುಖದಲ್ಲಿ ತೇಲುತ್ತಿರುವಾಗ, ರಸ್ತೆಯ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ರಾತ್ರಿ 8.45 ನಿಮಿಷಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ವಾಹನದ ಚಾಲಕ ಹಾಗೂ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಎದುರಿನಿಂದ ಬರುತ್ತಿದ್ದ ವಾಹನದಲ್ಲಿದ್ದ 31 ವರ್ಷದ ವ್ಯಕ್ತಿ ಹಾಗೂ ಇಬ್ಬರು ಮಕ್ಕಳಿಗೆ ಅಲ್ಪ ಸ್ವಲ್ಪ ಗಾಯಗಳಾಗಿವೆ . ಆದರೆ ಜೀವಬೆದರಿಕೆಯಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
" ಮುತ್ತಿನ ಮತ್ತು ತಂದ ಅಫಘಾತ ' ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.