ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಿಂದ 4.5 ಬಿನ್ ಡಾಲರ್ ಶಸ್ತ್ರಾಸ್ತ್ರ ಖರೀದಿ (Pakistan | America | Arms purchase | Congress)
 
ಪಾಕಿಸ್ತಾನ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ತೊಡಗಿದ್ದು, ಕಳೆದ 2005 ರಿಂದ 2008 ರವರೆಗೆ 4.5 ಬಿಲಿಯನ್ ಡಾಲರ್‌ಗಳ ಮೊತ್ತದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅಮೆರಿಕೆಗೆ ಬೇಡಿಕೆ ಸಲ್ಲಿಸಿದೆ. ಅದರಲ್ಲಿ ಎಫ್‌-16 ಯುದ್ಧ ವಿಮಾನಗಳು 155 ಆರ್ಟಿಲ್ಲರಿ ಗನ್‌ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.

36 ಎಫ್-16 ಫೈಟರ್ ಜೆಟ್‌ಗಳು ಏರ್ -ಟು-ಏರ್ ಮಿಸೈಲ್‌ಗಳು ಮತ್ತು 640 ಮಿಲಿಯನ್ ಡಾಲರ್‌ ಮೊತ್ತದ ಬಾಂಬ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಶಸ್ತ್ರಾಸ್ತ್ರಗಳ ಖರೀದಿಯಿಂದಾಗಿ ಪಾಕ್‌ನಲ್ಲಿರುವ ಎಫ್‌-16 ಫೈಟರ್ ಜೆಟ್ ವಿಮಾನಗಳನ್ನು ಅತ್ಯಾಧುನಿಕ ಮಾದರಿಯಾಗಿ ಪರಿವರ್ತಿಸುವುದು ಸೇರಿದೆ ಎಂದು ಅಮೆರಿಕದ ಮೂಲಗಳು ತಿಳಿಸಿವೆ.

ಶಸ್ತ್ರಾಸ್ತ್ರ ಖರೀದಿ ಒಪ್ಪಂದದ ಪ್ರಕಾರ , 52 ಮಿಲಿಯನ್ ವೆಚ್ಚದಲ್ಲಿ ಸ್ವಯಂಚಾಲಿತ ಗನ್‌ಗಳು ಖರೀದಿಸಲು ನಿರ್ಧರಿಸಲಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಇಂತಹ ಗನ್‌ಗಳ ಕೊರತೆಯನ್ನು ಎದುರಿಸಿತ್ತು.

ಅಮೆರಿಕ ಶಶ್ತ್ರಾಸ್ತ್ರ ಒಪ್ಪಂದದ ಮೂಲಗಳ ಪ್ರಕಾರ , ಪಾಕಿಸ್ತಾನ 2006ರಲ್ಲಿ 3.5 ಬಿಲಿಯನ್ ಡಾಲರ್‌ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಸಹಿ ಹಾಕಿ ಶಸ್ತ್ರಾಸ್ತ್ರ ಖರೀದಿಸ ಬಯಸುವ ಗ್ರಾಹಕರಲ್ಲಿ ಮುಂಚೂಣಿಯಲ್ಲಿತ್ತು ಎಂದು ಅಮೆರಿಕದ ಸಂಸದೀಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ