ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನಿಗಳ ಸರ್ವನಾಶವೇ ನಮ್ಮ ಗುರಿ ; ಜರ್ದಾರಿ (:Pakistan | Taliban | Asif Ali Zardari)
 
PTI
ಪಾಕಿಸ್ತಾನದ ಸೇನಾಪಡೆಗಳು ತಾಲಿಬಾನಿಗಳನ್ನು ಬೆನ್ನಟ್ಟಿದ್ದು, ಅವರನ್ನು ಸರ್ವನಾಶಗೊಳಿಸುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾಯಕ ಬೈತುಲ್ಲಾ ಮೆಹಸೂದ್‌ನನ್ನು ಹತ್ಯೆಗೈದ ಬಳಿಕ, ತಾಲಿಬಾನ್ ನಾಯಕತ್ವವನ್ನು ಅಂತ್ಯಗೊಳಿಸಿದಂತಾಗಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.

ಬೈತುಲ್ಲಾ ಅವರ ಹತ್ಯೆಯಿಂದಾಗಿ, ತಾಲಿಬಾನ್ ನಾಯಕರಲ್ಲಿ ಸಮನ್ವಯದ ಕೊರತೆ ಎದುರಾಗಿದೆ ಎಂದು ಜರ್ದಾರಿ ದಿ ಫೈನಾನ್ಶಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಯೋತ್ಪಾದಕರ ಮೇಲೆ ಪಾಕ್ ಸೇನಾಪಡೆಗಳು ನಿರಂತರ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ, ತಾಲಿಬಾನಿಗಳ ಆತ್ಮಾಹುತಿ ದಳದ ಸಂಪರ್ಕಜಾಲ ಕಡಿತಗೊಂಡಿದ್ದು, ಉಗ್ರಗಾಮಿ ಕೃತ್ಯಗಳಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದ್ದಾರೆ.

ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಸೇನಾಪಡೆಗಳು ಕೇವಲ ಗ್ರಾಮೀಣ ಭಾಗಗಳತ್ತ ಗಮನಹರಿಸುತ್ತಿವೆ ಎಂದು ಜರ್ದಾರಿ ತಿಳಿಸಿದ್ದಾರೆ.

ತಾಲಿಬಾನಿಗಳ ವಿರುದ್ಧ ಕಳೆದ ಐದು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿರುವ ಸ್ಟಾತ್ ಕಣಿವೆಯ ಕಾರ್ಯಾಚರಣೆಯಲ್ಲಿ ಸೇನಾಪಡೆಗಳು ಸುಮಾರು 1800 ಉಗ್ರರನ್ನು ಹತ್ಯೆ ಮಾಡಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ