ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮದ್ಯಪಾನಿಗೆ ಜೈಲು ಶಿಕ್ಷೆ ವಿಧಿಸಿದ ಮಲೇಶ್ಯಾ ನ್ಯಾಯಾಧೀಶ (Muslim man | Malaysian judge | drinking | jail)
 
ಮದ್ಯಪಾನ ಮಾಡಿರುವ ಅಪರಾಧಕ್ಕಾಗಿ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಛಡಿಯೇಟು ನೀಡುವಂತೆ ಹಾಗೂ ಜೈಲು ಶಿಕ್ಷೆ ವಿಧಿಸುವಂತೆ ಮಲೇಷ್ಯಾದ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದಾರೆ. ಬಹಿರಂಗ ಸ್ಥಳದಲ್ಲಿ ಮದ್ಯಪಾನ ಮಾಡಿದ ಮಹಿಳೆಯೊಬ್ಬಾಕೆಗೆ ಛಡಿಯೇಟಿನ ಶಿಕ್ಷೆಗೆ ಆದೇಶ ನೀಡಿದ್ದು ಇದು ರಾಷ್ಟ್ರಾದ್ಯಂತ ಸುದ್ದಿ ಚರ್ಚೆಯಾಗುತ್ತಿರುವಂತೆಯೇ ನ್ಯಾಯಾಧೀಶರೊಬ್ಬರು ಮದ್ಯಪಾನ ಸೇವನೆಗೆ ಶಿಕ್ಷೆ ವಿಧಿಸಿರುವ ಮತ್ತೊಂದು ಪ್ರಕರಣ ವರದಿಯಾಗಿದೆ.

ಪಶ್ಚಿಮ ಪಹಂಗ್ ರಾಜ್ಯದ ಹೈಕೋರ್ಟ್ ನ್ಯಾಯಾಧೀಶ ಅಬ್ದುಲ್ ರಹ್ಮಾನ್ ಯೂನಸ್ ಎಂಬವರು ಇಂಡೋನೇಶ್ಯದ ಕಾರ್ಮಿಕನೊಬ್ಬನಿಗೆ ಮದ್ಯಪಾನ ಮಾಡಿರುವ ಅಪರಾಧಕ್ಕಾಗಿ ಆರು ಛಡಿಯೇಟು ಹಾಗೂ ಒಂದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂಬುದಾಗಿ ನ್ಯಾಯಾಲಯದ ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್ 27ರಂದು ನಜರುದ್ದೀನ್ ಕಮರುದ್ದೀನ್ ತಾನು ಮದ್ಯಸೇವಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಸೆಪ್ಟೆಂಬರ್ 2ರಂದು ಆರೋಪ ಹೇರಿದ ಬಳಿಕ ಆತ ಜೈಲಿನಲ್ಲಿದ್ದಾನೆ.

ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರವಾಗಿರುವ ಮಲೇಷ್ಯಾದಲ್ಲಿ ಮದ್ಯಸೇವನೆ ಶಿಕ್ಷಾರ್ಹ ಅಪರಾಧ. ಆದರೆ ಒಟ್ಟು 13 ರಾಷ್ಟ್ರಗಳಲ್ಲಿ ಕೇವಲ 3 ರಾಜ್ಯಗಳು ಮಾತ್ರ ಛಡಿಯೇಟಿನ ಶಿಕ್ಷೆ ನೀಡುತ್ತವೆ. ಉಳಿದ ರಾಜ್ಯಗಳು ಜೈಲುಶಿಕ್ಷೆ ಅಥವಾ ದಂಡ ವಿಧಿಸುತ್ತವೆ.

ಪವಿತ್ರಮಾಸವಾಗಿರುವ ರಂಜಾನ್ ತಿಂಗಳಲ್ಲಿ ಮಧುಪಾನ ಮಾಡಿರುವುದಕ್ಕೆ ನ್ಯಾಯಾಧೀಶರು ನಜರುದ್ದೀನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜುಲೈತಿಂಗಳಲ್ಲಿ ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಮದ್ಯಪಾನ ಮಾಡಿರುವುದಕ್ಕಾಗಿ ಆಕೆಗೆ ಆರು ಛಡಿಯೇಟು ಹಾಗೂ ದಂಡ ವಿಧಿಸಲಾಗಿದೆ. ಒಂದೊಮ್ಮೆ ಈ ಶಿಕ್ಷೆ ಜಾರಿಗೆ ಬಂದರೆ, ಮಲೇಷ್ಯಾದಲ್ಲಿ ಛಡಿಯೇಟು ತಿಂದ ಮೊದಲ ಮಹಿಳೆ ಇವರಾಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ