ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಭೀಕರ ಬಾಂಬ್ ಸ್ಫೋಟಕ್ಕೆ 25 ಬಲಿ (Peshawar | Pakistan | Taliban | Afghanistan)
 
ಪಾಕಿಸ್ತಾನದ ವಾಯುವ್ಯ ಭಾಗದ ಕಾಚಾ ಪಾಕಾ ಎಂಬ ಮಾರ್ಕೆಟ್ ಪ್ರದೇಶದ ಹೋಟೆಲ್ ಸಮೀಪ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಸುಮಾರು 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭೀಕರ ಆತ್ಮಾಹುತಿ ದಾಳಿಗೆ ಮಾರ್ಕೆಟ್ ಪ್ರದೇಶ ಸಂಪೂರ್ಣ ಭಸ್ಮವಾಗಿರುವುದಾಗಿ ಪೊಲೀಸ್ ಅಧಿಕಾರಿ ಅಸ್ಮತ್ ಉಲ್ಲಾ ಹೇಳಿದ್ದು, ಸ್ಫೋಟದಲ್ಲಿ ಸುಮಾರು 25ಮಂದಿ ಸಾವನ್ನಪ್ಪಿದ್ದಾರೆ. ಶಿಯಾ ಪಂಗಡಕ್ಕೆ ಸೇರಿದ್ದ ಹೋಟೆಲ್ ಅನ್ನು ಗುರಿಯಾಗಿರಿಸಿಕೊಂಡು ಈ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ಫೋಟದಿಂದ ಹಲವಾರು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಗುರುವಾರವಷ್ಟೇ ಕೋಹತ್ ಪ್ರದೇಶದಲ್ಲಿ ಬಾಂಬ್ ಸ್ಫೋಟದಿಂದಾಗಿ ಆರು ಮಂದಿ ಗಾಯಗೊಂಡಿದ್ದರು. ಈ ಆತ್ಮಾಹುತಿ ದಾಳಿಯನ್ನು ಯಾವ ಸಂಘಟನೆಗಳೂ ಈವರೆಗೆ ಹೊಣೆ ಹೊತ್ತುಕೊಂಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ